ಅಭಿಪ್ರಾಯ / ಸಲಹೆಗಳು

ಗುರಿ ಮತ್ತು ಉದ್ದೇಶಗಳು

  • ಕನಕದಾಸರ ಜೀವನ, ಸಂದೇಶ ಮತ್ತು ಸಾಹಿತ್ಯ ಕುರಿತಂತೆ ಅಧ್ಯಯನ, ಸಂಶೋಧನೆ, ಪ್ರಕಟಣೆ ಹಾಗೂ ಪ್ರಸಾರ ಕಾರ್ಯಗಳನ್ನು ಮಾಡುವುದು ಹಾಗೂ ಕನಕದಾಸರ ಸಾಹಿತ್ಯ, ವಿಚಾರ, ಚಿಂತನೆಗಳನ್ನು ವಿವಿಧ ಜ್ಞಾನಶಾಖೆಗಳೊಂದಿಗೆ ತೌಲನಿಕ ಅಧ್ಯಯನ ಮಾಡುವುದು.
  • ಕನಕದಾಸರ ಬದುಕು ಮತ್ತು ಕೃತಿಗಳನ್ನು ದೇಶದ ಹಾಗೂ ವಿಶ್ವದ ಇತರೆ ಭಾಷೆಗಳಿಗೆ ಅನುವಾದಿಸಿ ಪ್ರಕಟಿಸುವುದು,ಅಂತಹ ಪ್ರಕಟಣೆಗಳಿಗೆ ಪ್ರೋತ್ಸಾಹ ನೀಡುವುದು.
  • ಗ್ರಂಥಗಳು, ಪತ್ರಿಕೆಗಳು, ಛಾಯಾಚಿತ್ರಗಳು, ಮೈಕ್ರೋ ಫಿಲಂಗಳು, ಧ್ವನಿಮುದ್ರಣ ಸಲಕರಣೆಗಳನ್ನುಳ್ಳ ಆಕರ ಗ್ರಂಥಾಲಯವನ್ನು ಸ್ಥಾಪಿಸುವುದು. ಅಲ್ಲಿ ಸಂಶೋಧನಾರ್ಥಿ ಹಾಗೂ ಸಾಹಿತ್ಯಾಭಿಮಾನಿಗಳಿಗೆ ಪರಾಮರ್ಶನ ಕಾರ್ಯಕ್ಕೆ ಸುಸಜ್ಜಿತ ವ್ಯವಸ್ಥೆ ಮಾಡುವುದು. ಕನಕದಾಸರ ವಿಚಾರಗಳ ವ್ಯಾಪಕ ಪ್ರಚಾರಕ್ಕಾಗಿ ನಿಯತಕಾಲಿಕೆ ಪ್ರಕಟಿಸುವುದು.
  • ಕನಕದಾಸರ ಕೃತಿಗಳನ್ನು ಕನ್ನಡ ಹಾಗೂ ಇತರೆ ಭಾಷೆಗಳ ಮೂಲಕ ದೃಶ್ಯ ಮಾಧ್ಯಮಗಳಲ್ಲಿ ಸಿದ್ಧಪಡಿಸಿ ಪ್ರಸಾರ ಮಾಡುವುದು.
  • ಕನಕದಾಸರನ್ನು ರಾಜ್ಯ, ರಾಷ್ಟ್ರ ಹಾಗೂ ವಿಶ್ವದ ಇತರೆ ಸಮಾನಕವಿ ಹಾಗೂ ಸೂಫಿ ಸಂತರ ಕೃತಿಗಳ, ಜೀವನದರ್ಶನ ಸಂಬಂಧೀ ತೌಲನಿಕ ಅಧ್ಯಯನ ಮಾಡುವುದು ಮತ್ತು ಅಂತಹ ಅಧ್ಯಯನಗಳನ್ನು ಪ್ರಕಟಿಸುವುದು ಪ್ರಕಟಿಸಲು ಪ್ರೋತ್ಸಾಹ ನೀಡುವುದು.
  • ಕನಕದಾಸರ ಸಾಹಿತ್ಯಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕೊಡುಗೆಗಳನ್ನು ಅಕಾಡೆಮಿಕ್ ಹಾಗೂ ಸಾರ್ವಜನಿಕ ವಲಯಗಳಲ್ಲಿ ಹೆಚ್ಚು ಪ್ರಚಾರಕ್ಕೆ ತರುವುದರ ಬಗ್ಗೆ ಕನ್ನಡ ಹಾಗೂ ವಿವಿಧ ಭಾಷೆಗಳಲ್ಲಿ ವಿಶೇಷ ಉಪನ್ಯಾಸ, ಸಮ್ಮೇಳನ,ಸಭೆ, ವಿಚಾರಸಂಕಿರಣ , ಸಂವಾದ, ಕಮ್ಮಟಗಳನ್ನು ಏರ್ಪಡಿಸುವುದು.
  • ವಿಚಾರ ವಿನಿಮಯ ಆಧಾರದ ಮೇಲೆ ಹೊರರಾಜ್ಯ, ವಿದೇಶಗಳಿಗೆ ಮತ್ತು ಅಲ್ಲಿಂದ ಕರ್ನಾಟಕಕ್ಕೆ ವಿದ್ವಾಂಸರು, ಕಲಾವಿದರನ್ನು ಸಮ್ಮೇಳನ, ಗೋಷ್ಠಿಗಳಿಗೆ ಆಹ್ವಾನಿಸುವುದು ಮತ್ತು ಕಳುಹಿಸಿಕೊಡುವುದು.
  • ಕನಕದಾಸರ ಕೃತಿಗಳ ಅಧ್ಯಯನದ ಬಗ್ಗೆ ಯುವಜನತೆಯನ್ನು ತೊಡಗಿಸಲು ಅಗತ್ಯವಾದಂಥ ಎಲ್ಲ ಬಗೆಯ ಕಾರ್ಯಕ್ರಮಗಳನ್ನು ನಡೆಸುವುದು. ವಿಶೇಷವಾಗಿ ಕಾವ್ಯ, ಲೇಖನ, ಸಂಗೀತ, ನೃತ್ಯ, ಲಲಿತಕಲಾ ಶಿಬಿರಗಳನ್ನು, ಸ್ಪರ್ಧೆಗಳನ್ನು, ಕಮ್ಮಟಗಳನ್ನು ಏರ್ಪಡಿಸುವುದು.
  • ಕನಕದಾಸರ ಬಗ್ಗೆ ವಿವಿಧ ದೃಷ್ಟಿಕೋನಗಳಿಂದ ವಿಶೇಷ ಅಧ್ಯಯನ ಮಾಡುವ ಅರ್ಹ ಸಂಶೋಧನಾರ್ಥಿಗಳಿಗೆ ರೂ. 1,00,000 ಗಳಂತೆ ವರ್ಷಕ್ಕೆ 3 ಜನರಿಗೆ ಫೆಲೋಶಿಪ್ ನೀಡುವುದು. ಹಾಗೂ ಯುವ ಸಾಹಿತಿ/ ಕಲಾವಿದರ ಕೃತಿಗಳ ಪ್ರಕಟಣೆಗೆ ಆರ್ಥಿಕ ನೆರವು ಒದಗಿಸುವುದು.
  • ಕನಕದಾಸರ ಬಗ್ಗೆ ಆಳ ಅಧ್ಯಯನ ಮಾಡಿದ ವಿದ್ವಾಂಸರಿಗೆ ಹಾಗೂ ಕನಕದಾಸರ ಸಾಮಾಜಿಕ ಚಿಂತನೆ, ಜೀವನ ಸಂದೇಶಗಳ ಅನುಷ್ಠಾನಕ್ಕಾಗಿ ಶ್ರಮಿಸಿದವರಿಗೆ ಗೌರವ ಮನ್ನಣೆ ಮಾಡುವುದು ಹಾಗೂ ಈ ಕ್ಷೇತ್ರದಲ್ಲಿ ತೊಡಗಿರುವ 40 ವರ್ಷದೊಳಗಿನ ಯುವ ವಿದ್ವಾಂಸರಿಗೆ ‘ಕನಕ ಯುವ ಪುರಸ್ಕಾರ’ ನೀಡಿ ಪ್ರೋತ್ಸಾಹಿಸುವುದು.
  • ವಿಶ್ವವಿದ್ಯಾಲಯಗಳು ಹಾಗೂ ಇತರೆ ಕನಕ ಅಧ್ಯಯನ ಪೀಠಗಳೊಂದಿಗೆ ಕಾರ್ಯಕ್ರಮ ಏರ್ಪಡಿಸುವುದು ಮತ್ತು ಅವುಗಳೊಂದಿಗೆ ಸಮನ್ವಯ ಸಾಧಿಸುವುದು.

ಇವು ಹಲವು ಯೋಜನೆಗಳು.


    •   ಇವುಗಳ ಜೊತೆಗೆ ಸಂಸ್ಕೃತಿ ಚಿಂತಕರ, ಕನಕದಾಸರ ಅಭಿಮಾನಿಗಳ ಜೊತೆ ನಿಯತವಾಗಿ ಸಂವಾದ ಸಮಾಲೋಚನೆಗಳ ಮೂಲಕ ಕೇಂದ್ರದ ಉದ್ದೇಶ, ಕಾರ್ಯಕ್ರಮಗಳನ್ನು ರಚನಾತ್ಮಕವಾಗಿ ವಿಸ್ತರಿಸುವ ಆಶಯ.

  • ಕನಕದಾಸರ ಕುರಿತ ಅಭ್ಯಾಸಿಗಳು, ಸಂಶೋಧನಾರ್ಥಿಗಳು ಸಂಶೋಧನಾ ಕೇಂದ್ರಕ್ಕೆ ಬಂದು ಅಭ್ಯಾಸ ಮಾಡುವ ಕಾರ್ಯಕ್ಕೆ ಉತ್ತೇಜನ.

ಇತ್ತೀಚಿನ ನವೀಕರಣ​ : 02-09-2021 11:47 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080