ಅಭಿಪ್ರಾಯ / ಸಲಹೆಗಳು

ಅಧ್ಯಯನ ಕೇಂದ್ರ ಮುಂಮಾತು

ಕನಕದಾಸರು ಭಾರತೀಯ ಸಾಂಸ್ಕೃತಿಕ ಬದುಕಿನಲ್ಲಿ ಚಿರಸ್ಥಾಯಿಯಾಗಿ ನೆಲೆ ನಿಂತ ಸಂತಕವಿ. ಒಬ್ಬ ಭಕ್ತನಾಗಿ, ಕ್ರಾಂತಿಕಾರಿಯಾಗಿ, ಸಮಾಜ ಸುಧಾರಕರಾಗಿ ಕನಕದಾಸರ ಸಾಧನೆ ಬಹುದೊಡ್ಡದು. ಇವರು ನಾಲ್ಕು ಕಾವ್ಯ ಕೃತಿಗಳು ಮತ್ತು ನೂರಾರು ಕೀರ್ತನೆಗಳನ್ನು ರಚಿಸಿದ್ದಾರೆ. ಮನುಷ್ಯಕುಲ ಉದ್ಧಾರವಾಗುವುದು ಸ್ವಾರ್ಥ ಮೂಲವಾದ ಮಾತುಗಳಿಂದಲ್ಲ, ಆಚರಣೆಗಳಿಂದಲ್ಲ ಅದನ್ನು ಮೀರಿದ ಮಾನವೀಯ ಗುಣಗಳಿಂದ ಎಂಬುದು ಅವರ ಸಂದೇಶ. ತಮ್ಮ ಸ್ವತಂತ್ರ ಮನೋಧರ್ಮ, ವಿಶಿಷ್ಟ ಆಲೋಚನೆ, ನೇರ ನುಡಿ ಮತ್ತು ಜನಸಾಮಾನ್ಯರ ಜೀವನಾನುಭವಗಳಿಂದ ಒಡನಾಡಿ ಪಡೆದುಕೊಂಡ ಅವರ ಅಭಿವ್ಯಕ್ತಿಯು ಅಲೌಕಿಕ ಮತ್ತು ಲೌಕಿಕ ಬದುಕಿಗೆ ನಿಚ್ಚಳ ಮಾರ್ಗವನ್ನು ತೋರಿಸುತ್ತದೆ. ಅವರ ಕೀರ್ತನೆಗಳು ಸಂಗೀತ ಕ್ಷೇತ್ರಕ್ಕೆ ಹೊಸ ಮಾರ್ಗಗಳನ್ನು ನಿರ್ಮಿಸಿವೆ. ಈ ಬಗೆಯ ಜೀವನ, ತತ್ವಾದರ್ಶ ಮತ್ತು ಸಾಮಾಜಿಕ ಕಾಳಜಿಗಳಿಂದಾಗಿ ಕನಕದಾಸರ ಬದುಕು ಮತ್ತು ಸಾಹಿತ್ಯವು ಕನ್ನಡ ಸಾಹಿತ್ಯದಲ್ಲಿ ಅಷ್ಟೇ ಅಲ್ಲ ಭಾರತೀಯ ಸಾಂಸ್ಕೃತಿಕ ಸಂದರ್ಭದಲ್ಲಿಯೂ ಬಹು ಮುಖ್ಯವಾಗಿದೆ. 16ನೆಯ ಶತಮಾನದ ಈ ಸಂತಕವಿಯ ಜೀವನ ಸಂದೇಶ, ಕಾಲ, ಧರ್ಮಗಳನ್ನು ಮೀರಿ ಇಂದಿಗೂ ಬಹು ಪ್ರಸ್ತುತವಾಗಿದೆ. ಈ ಆಧುನಿಕ ದಿನಗಳಲ್ಲಿಯಂತು ಕನಕದಾಸರ ಸಾಹಿತ್ಯಕ ಅಭಿವ್ಯಕ್ತಿ ಮತ್ತು ಜೀವನ ಸಂದೇಶದ ಬಗ್ಗೆ ಅರಿವುಂಟುಮಾಡುವುದು ಅತ್ಯಂತ ಅಗತ್ಯವಾಗಿದೆ.


ಸಂತಕವಿ ಕನಕದಾಸರ ಸಾಮಾಜಿಕ, ಸಾಂಸ್ಕೃತಿಕ, ಪಾರಮಾರ್ಥಿಕ ಚಿಂತನೆಗಳ ಜೊತೆಗೆ ಅವರ ಕಾವ್ಯಗಳು, ಕೀರ್ತನೆಗಳು ದರ್ಶಿಸಲಪೇಕ್ಷಿಸುತ್ತಿರುವ ದಿಕ್ಕು ಮತ್ತು ಮಾನವೀಯ ಸಂದೇಶಗಳ ಕುರಿತಂತೆ ಹೊಸ ಹೊಸ ಅಧ್ಯಯನಗಳು, ಸಂಶೋಧನೆಗಳು, ಪ್ರಕಟಣೆಗಳು ಹಾಗೂ ಇವುಗಳ ಪ್ರೋತ್ಸಾಹ ಮತ್ತು ಪ್ರಸಾರದ ಉದ್ದೇಶದಿಂದ ಕರ್ನಾಟಕ ಸರ್ಕಾರವು ರಾಷ್ಟ್ರೀಯ ಮಟ್ಟದಲ್ಲಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವನ್ನು ದಿನಾಂಕ 09.1.2012 ರ ಸರ್ಕಾರಿ ಆದೇಶ ಸಂಖ್ಯೆ: ಕಸಂವಾಪ್ರ/1435/ಕಸಧ/2011 ರ ಅನ್ವಯ ಬೆಂಗಳೂರಿನಲ್ಲಿ ಸ್ಥಾಪಿಸಿದೆ. ಈ ಕೇಂದ್ರದ ಕಾರ್ಯಚಟುವಟಿಕೆಗಳು 2012 ರ ಸೆಪ್ಟೆಂಬರ್ ರಿಂದ ಪ್ರಾರಂಭವಾದವು.

ಇತ್ತೀಚಿನ ನವೀಕರಣ​ : 08-09-2021 01:39 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080