ಅಭಿಪ್ರಾಯ / ಸಲಹೆಗಳು

ಕನಕ ಸಂಸ್ಕೃತಿ ಕಮ್ಮಟ ಮತ್ತು ರಸಗ್ರಹಣ ಶಿಬಿರಗಳು

ಕನಕ ಓದು:

ಕನಕದಾಸರ ಜೀವನ ದರ್ಶನ ಮತ್ತು ಕಾವ್ಯ ಸಂದೇಶಗಳನ್ನು ಚರ್ಚಿಸುವ ಹಾಗೂ ಪ್ರಧಾನವಾಗಿ ಕನಕದಾಸ ಕಾವ್ಯಗಳನ್ನು ಓದುವ ಕ್ರಮವನ್ನು ಗ್ರಹಿಸುವ ಎರಡು ದಿನಗಳ ಕಮ್ಮಟವನ್ನು ವಿದ್ಯಾರ್ಥಿಗಳಿಗಾಗಿ ಸಂಘಟಿಸಲಾಗುತ್ತಿದೆ. `ಕನಕ ಓದು’ ಶಿಬಿರಕ್ಕೆ ಆಹ್ವಾನಿಸುವ ವಿದ್ಯಾರ್ಥಿ ಹಾಗೂ ಉಪನ್ಯಾಸಕರಿಗೆ ಮುಂಚಿತವಾಗಿ ಈ ಉದ್ದೇಶಕ್ಕಾಗಿ ಸಿದ್ಧಪಡಿಸಿರುವ `ಕನಕ ಓದು’ ಎಂಬ ಪುಸ್ತಕವನ್ನು ಕಳುಹಿಸಲಾಗುತ್ತದೆ. ಅವರು ಪೂರ್ವಸಿದ್ಧತೆಯೊಂದಿಗೆ ಓದಿಕೊಂಡು ಬಂದು ಕಾವ್ಯವನ್ನು ಓದುವ, ವ್ಯಾಖ್ಯಾನಿಸುವ, ಅರ್ಥವಿಶ್ಲೇಷಣೆ ಮಾಡುವ ಬಗೆಗಳನ್ನು, ಪರಸ್ಪರ ಓದುವ, ಚರ್ಚಿಸುವ ಮತ್ತು ಗ್ರಹಿಸುವ ಮೂಲಕ ಮನದಟ್ಟು ಮಾಡಿಕೊಡಲಾಗುತ್ತದೆ. ಈ ಅರಿವಿನ ಶಿಬಿರ ೨೦೧೬ನೆಯ ಸಾಲಿನಿಂದ ಆರಂಭವಾಗಿದೆ. 

 

 

ಮುತ್ತು ಬಂದಿದೆ ಕೇರಿಗೆ:

ಶಾಲಾ ಕಾಲೇಜುಗಳಲ್ಲಿ ಕನಕದಾಸರ ಕಾವ್ಯಗಳ ವಾಚನ, ಗಾಯನ ಮತ್ತು ತನ್ಮೂಲಕ ಕನಕದಾಸರ ಬಗ್ಗೆ ವಿದ್ಯಾರ್ಥಿ ವೃಂದಗಳಲ್ಲಿ ಜಾಗೃತಿ ಮೂಡಿಸುವ ರಸಗ್ರಹಣ ಶಿಬಿರಗಳನ್ನು ಏರ್ಪಡಿಸಲಾಗುತ್ತಿದೆ. ಅರ್ಧದಿನದ ಈ ಶಿಬಿರದಲ್ಲಿ ಒಬ್ಬ ವಿದ್ವಾಂಸರು ಕನಕದಾಸರ ಕುರಿತು ಪರಿಚಯ ಉಪನ್ಯಾಸ ನೀಡುತ್ತಾರೆ. ಜೊತೆಜೊತೆಯಲ್ಲಿ ಸಂಗೀತ ಕಲಾವಿದರು ಕನಕದಾಸರ ಕಾವ್ಯ ಕೀರ್ತನೆಗಳನ್ನು ಹಾಡುತ್ತಾರೆ. ಹೀಗೆ ಮಾತು ಮತ್ತು ಹಾಡುಗಳ ಮೂಲಕ ಕನಕದಾಸರ ವೈಶಿಷ್ಟ್ಯವನ್ನು ವಿದ್ಯಾರ್ಥಿ ಸಮುದಾಯದಲ್ಲಿ ಪರಿಚಯಿಸುವುದು ಈ ಯೋಜನೆಯ ಆಶಯ.

 

 

ಕನಕ ಕಾವ್ಯ ಗಮಕ ವ್ಯಾಖ್ಯಾನ ಶಿಬಿರ:

ವಿದ್ಯಾರ್ಥಿಗಳಿಗೆ ಹಾಗೂ ಯುವ ಸಮುದಾಯಕ್ಕಾಗಿ ಕನಕದಾಸರ ಕಾವ್ಯಗಳನ್ನು ಗಮಕದಲ್ಲಿ ವಿದ್ವಾಂಸರಿಂದ ಹಾಡಿಸಿ ಅವುಗಳ ವ್ಯಾಖ್ಯಾನ ಮಾಡುವುದು.


ಕನಕದಾಸರ ಕಾವ್ಯ ಕೃತಿಗಳ ಕಾರ್ಯಾಗಾರ :

ಕನಕದಾಸರು ಕನ್ನಡ ಸಾಹಿತ್ಯ–ಸಂಸ್ಕೃತಿಯಲ್ಲಿ ಚಿರಸ್ಥಾಯಿಯಾಗಿ ನೆಲೆನಿಂತ ವ್ಯಕ್ತಿವಿಶೇಷ. ಇವರು ಶ್ರೇಷ್ಠ ಹರಿಭಕ್ತರು, ಸಂತರು, ಕವಿಗಳು, ಕ್ರಾಂತಿಕಾರಿಯಾಗಿ ಹಾಗೂ ಸಾಮಾಜಿಕ ಕಳಕಳಿಯುಳ್ಳ ಮಾನವತವಾದಿ. ಕನಕದಾಸರ ಕಾವ್ಯ ಮತ್ತು ಕೀರ್ತನೆಗಳಲ್ಲಿ ಸಾಂಸ್ಕೃತಿಕ ಸಂವೇದನಾ ಶೀಲತೆಯನ್ನು ದಟ್ಟವಾಗಿ ಕಾಣಬಹುದು. ಪ್ರಸ್ತುತ ‘ಕನಕ ಮನೆ ಮನೆ ತನಕ’ ಎಂಬ ಶೀರ್ಷಿಕೆಯಡಿಯಲ್ಲಿ ಕನಕದಾಸರ ಕಾವ್ಯ ಕೃತಿಗಳನ್ನು ಪ್ರಚುರಪಡಿಸುವ ಉದ್ದೇಶವಾಗಿದೆ.

ಇತ್ತೀಚಿನ ನವೀಕರಣ​ : 02-09-2021 12:25 PM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080