ಅಭಿಪ್ರಾಯ / ಸಲಹೆಗಳು

ವಿಶೇಷ ಯೋಜನೆಗಳು

() ಕನಕದಾಸರ ಸಮಗ್ರ ಸಾಹಿತ್ಯ ಅನುವಾದ ಯೋಜನೆ

ಸಂತಶ್ರೇಷ್ಠ ಕವಿಯ ಕೃತಿಗಳ ಕಾವ್ಯ ವಿಸ್ತಾರ ಮತ್ತು ಆಶಯಗಳು ವಿನೂತನವಾಗಿದ್ದು ಭಾರತೀಯ ಸಾಹಿತ್ಯ ಚರಿತ್ರೆಗೆ ಬೆಲೆಯುಳ್ಳ ಕೊಡುಗೆಗಳಾಗಿವೆ. ಆದ್ದರಿಂದ ಕನಕದಾಸರ ಸಮಗ್ರ ಸಾಹಿತ್ಯವನ್ನು ಇಂಗ್ಲಿಷ್, ಹಿಂದಿ, ಉರ್ದು, ತೆಲುಗು, ತಮಿಳು, ಮಲೆಯಾಳಂ, ಕೊಂಕಣಿ, ಕೊಡವ, ಬ್ಯಾರಿ, ತುಳು, ಸಂಸ್ಕೃತ, ಮರಾಠಿ, ಪಂಜಾಬಿ, ಬೆಂಗಾಲಿ, ಅಸ್ಸಾಮಿ – ಈ ೧೫ ಭಾಷೆಗಳಿಗೆ ಅನುವಾದಿಸಲಾಗುತ್ತಿದೆ. ಈ ೧೫ ಭಾಷೆಗಳಿಗೆ ಅನುವಾದ ಮಾಡುವ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ೧೫ ಜನ ಭಾಷಾ ಸಂಪಾದಕರು, ೫ ಜನ ಕನ್ನಡ ವಿದ್ವಾಂಸರ, ೧೫ ಜನ ಭಾಷಾ ಪರಿಶೀಲಕರ ಮಾರ್ಗದರ್ಶನದಲ್ಲಿ ೯೦ ಜನ ಅನುವಾದಕರು ಕಾರ್ಯನಿರ್ವಹಿಸಿದ್ದಾರೆ. ಈ ೧೫ ಭಾಷೆಗಳ ಪೈಕಿ ೧೩ ಭಾಷಾ ಆವೃತ್ತಿಗಳು ಮುದ್ರಣ ಹಂತದಲ್ಲಿವೆ. ೨ ಭಾಷಾ ಆವೃತ್ತಿಗಳ ಪರಿಶೀಲನಾ ಕಾರ್ಯ ನಡೆಯುತ್ತಿದೆ. ಇದರಲ್ಲಿ ಪಂಜಾಬಿ ಭಾಷಾ ಆವೃತ್ತಿಯು ಸಮರ್ಥ ಅನುವಾದಕರು ದೊರಕದ ಕಾರಣ ಈ ಭಾಷೆಯ ಬದಲಿಗೆ ಗುಜರಾತಿ ಭಾಷೆಯ ಅನುವಾದ ಕಾರ್ಯ ಕೈಗೆತ್ತಿಕೊಂಡಿದೆ. ಪ್ರಸಕ್ತ ೧೩ ಭಾಷಾ ಆವೃತ್ತಿಗಳಲ್ಲಿ ತಲಾ ೩ ಸಂಪುಟಗಳಂತೆ ಕನಕದಾಸರ ಸಮಗ್ರ ಅನುವಾದ ಸಾಹಿತ್ಯ ಪ್ರಕಟಗೊಳ್ಳಲಿದೆ.

 

 () ಕರ್ನಾಟಕ ತತ್ವಪದಕಾರರ ಸಮಗ್ರ ಸಾಹಿತ್ಯ ಪ್ರಕಟಣಾ ಯೋಜನೆ

ಯಾವುದೇ ಜಾತಿ, ಧರ್ಮದ ಲೇಪವಿಲ್ಲದೆ ಮಾನವೀಯ ಧರ್ಮದ ಪ್ರತಿಪಾದನೆಯ ಪ್ರತೀಕವಾದ ತತ್ವಪದ ಸಾಹಿತ್ಯ ಪ್ರಕಾರವು ಬಹು ವಿಶಿಷ್ಟವಾದುದು. ಅಲ್ಲಲ್ಲಿ ಬಿಡಿ ಬಿಡಿಯಾಗಿ ಕೆಲವು ಪುಸ್ತಕಗಳಲ್ಲಿ ಪ್ರಕಟವಾಗಿದ್ದರೂ ಬಹುತೇಕ ತತ್ವಪದಗಳು ಇನ್ನೂ ಮೌಖಿಕ ಪರಂಪರೆಯಲ್ಲಿಯೇ ಉಳಿದಿವೆ. ಹೀಗೆ ರಾಜ್ಯದಾದ್ಯಂತ ಲಭ್ಯವಿರುವ ಪ್ರಕಟಿತ ಹಾಗೂ ಇನ್ನೂ ಪ್ರಕಟವಾಗದೇ ಹೇರಳವಾಗಿ ಉಳಿದಿರುವ ತತ್ವಪದ ಸಾಹಿತ್ಯವನ್ನು ಸಂಗ್ರಹಿಸಿ ಪ್ರಕಟಿಸುವ ಬೃಹತ್ ಯೋಜನೆ ರೂಪಿಸಿ ಜಾರಿಗೊಳಿಸಲಾಗುತ್ತಿದೆ. ಅಲ್ಲದೆ ಈ ಕಾರ್ಯ ಅಧ್ಯಯನ ಕೇಂದ್ರದ ತೌಲನಿಕ ಅಧ್ಯಯನದ ಉದ್ದೇಶಕ್ಕೂ ಪೂರಕವಾಗಿದೆ. ಆದ್ದರಿಂದ ರಾಜ್ಯದ ೨೭ ಜಿಲ್ಲೆಗಳಿಗೆ ಒಬ್ಬೊಬ್ಬ ಸಂಪಾದಕರು, ಅವರಿಗೆ ನೆರವಾಗಲು ಇಬ್ಬರು ಕ್ಷೇತ್ರ ತಜ್ಞರನ್ನು ನೇಮಿಸಲಾಗಿದೆ. ತತ್ವಪದಗಳ ಪರಿಶೀಲನೆ ಮತ್ತು ಮಾರ್ಗದರ್ಶನಕ್ಕಾಗಿ ಸಂಪಾದನಾ ಹಾಗೂ ಪರಿಶೀಲನಾ ಸಮಿತಿಯನ್ನು ರಚಿಸಲಾಗಿದೆ. ಒಟ್ಟಾರೆ ಐವತ್ತು ಸಂಪುಟಗಳು. ೩೨ ಬಿಡುಗಡೆಯಾಗಿವೆ. ೧೮ ಸಂಪುಟಗಳು ಮುದ್ರಣಕ್ಕೆ ಸಿದ್ಧವಾಗಿವೆ.

 

ತತ್ವಪದ ಸಂಗಮ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಕರ್ನಾಟಕದಲ್ಲಿರುವ ಪ್ರಮುಖ ತತ್ವಪದಕಾರರನ್ನು ಒಗ್ಗೂಡಿಸಿ, ತತ್ವಪದಗಳ ಗಾಯನ, ಪ್ರಾತ್ಯಕ್ಷಿಕೆಗಳನ್ನು ತತ್ವಪದ ಕಾವ್ಯ ಶಿವರಾತ್ರಿ ಎಂಬ ಹೆಸರಿನಲ್ಲಿ ಕರ್ನಾಟಕದಾದ್ಯಂತ ಅಹೋರಾತ್ರಿ ಕಾರ್ಯಕ್ರಮ ಏರ್ಪಡಿಸಲಾಗುವುದು.

ಇತ್ತೀಚಿನ ನವೀಕರಣ​ : 02-09-2021 02:50 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080