ಅಭಿಪ್ರಾಯ / ಸಲಹೆಗಳು

ಪ್ರದರ್ಶನ ಪ್ರಕಾರಗಳು

(i) ಕನಕ ಗೊಂಬೆಯಾಟ

ಸಂತಕವಿ ಕನಕದಾಸರನ್ನು ವಿಭಿನ್ನ ಮಾಧ್ಯಮಗಳಲ್ಲಿ ಪ್ರಚುರಪಡಿಸಿ ಪ್ರಸಾರ ಮಾಡುವುದು ಅಧ್ಯಯನ ಕೇಂದ್ರದ ಆಶಯ. ಈ ಆಶಯದಿಂದ ೯೦ ನಿಮಿಷಗಳ ಅವಧಿಯ ಕನಕಗೊಂಬೆಯಾಟವನ್ನು ಸಿದ್ಧಪಡಿಸಲಾಗಿದೆ. ಸಂಗೀತ ಪ್ರಧಾನವಾದ ಈ ಗೊಂಬೆಯಾಟದಲ್ಲಿ ಕನಕದಾಸರ ಜೀವನ ಹಾಗೂ ಸಾಹಿತ್ಯ ಕೃತಿಗಳ ಪರಿಚಯ ಮತ್ತು ಸಂದೇಶವನ್ನು ಕಲಾಭಿಮಾನಿಗಳಿಗೆ ಸುಲಭವಾಗಿ ತಲುಪಿಸುವ ದೃಷ್ಟಿಯಿಂದ ಸಿದ್ಧಪಡಿಸಲಾಗಿದೆ. ನಾಡೋಜ ಬೆಳಗಲ್ಲು ವೀರಣ್ಣನವರ ನೇತೃತ್ವದಲ್ಲಿ ಈ ಗೊಂಬೆಯಾಟವನ್ನು ಸಿದ್ಧಪಡಿಸಲಾಗಿದೆ. ಈ ಗೊಂಬೆಯಾಟವು ರಾಜ್ಯಾದ್ಯಂತ ಪ್ರದರ್ಶನಗೊಳ್ಳುತ್ತಿದೆ. ಹಿರಿಯ ವಿದ್ವಾಂಸರಾದ ಶ್ರೀ ನಿಸರ್ಗಪ್ರಿಯ ಅವರು ಕನಕಗೊಂಬೆಯಾಟಕ್ಕೆ ರಂಗಕೃತಿಯನ್ನು ರಚಿಸಿಕೊಟ್ಟಿದ್ದಾರೆ. ಇದರ ಪರಿಷ್ಕರಣವನ್ನು ಡಾ ಹಿ.ಶಿ. ರಾಮಚಂದ್ರೇಗೌಡ ಹಾಗೂ ಶ್ರೀ ಕಾ ತ ಚಿಕ್ಕಣ್ಣ ನೀಡಿದ್ದಾರೆ.

 

(ii) ಕನಕ ಕಾವ್ಯ ನೃತ್ಯ ವೈಭವ

ಅ) ಕನಕ ಕೀರ್ತನೆಗಳ ಆಧಾರಿತ ನೃತ್ಯರೂಪಕ.

೪೫ ನಿಮಿಷಗಳ ಅವಧಿಯ ಈ ನೃತ್ಯಕ್ಕೆ ಅಗತ್ಯವಾದ ಸಾಹಿತ್ಯ, ಕನಕದಾಸರ ಕಾವ್ಯ ಸಂಯೋಜನೆ, ಕೀರ್ತನೆಗಳ ಸ್ವರ ಸಂಯೋಜನೆ, ನೃತ್ಯ ಸಂಯೋಜನೆ ಮೂಲಕ ಈ ನೃತ್ಯರೂಪಕವನ್ನು ಸಿದ್ಧಪಡಿಸಲಾಗಿದೆ. ಶ್ರೀ ಕಾ.ತ.ಚಿಕ್ಕಿಣ್ಣ ಅವರು ಸಾಹಿತ್ಯವನ್ನು ಸಿದ್ಧಪಡಿಸಿದ್ದು, ಹಿರಿಯ ಮಾಂಡಲಿನ್ ಕಲಾವಿದರು ಹಾಗೂ ರಾಗ ಸಂಯೋಜಕರಾದ ಶ್ರೀ ಎನ್.ಎಸ್.ಪ್ರಸಾದ್ ಅವರಿಂದ ರಾಗ ಸಂಯೋಜಿಸಿದ್ದು, ನೃತ್ಯ ಸಂಯೋಜನೆಯನ್ನು ವಿದುಷಿ ಶ್ರೀಮತಿ ರೂಪ ರಾಜೇಶ್ ಅವರು ನಿರ್ವಹಿಸಿದ್ದಾರೆ.

 

ಆ) ಕನಕ ನೃತ್ಯ ರೂಪಕ – ಮೋಹನ ತರಂಗಿಣಿ ನೃತ್ಯ ವೈಭವ

ಕನಕದಾಸರ ಮೋಹನ ತರಂಗಿಣಿ ಎಂಬ ಸಾಂಗತ್ಯ ಕಾವ್ಯ ಒಂದು ಶೃಂಗಾರ ರಸದ ಸೃಷ್ಟಿ. ಈ ಕಾವ್ಯದಲ್ಲಿ ಕೃಷ್ಣ-ರುಕ್ಮಿಣಿ, ಮನ್ಮಥ-ರತಿ, ಅನಿರುದ್ಧ-ಉಷೆ ಇವರ ದಾಂಪತ್ಯರಸ ಸನ್ನಿವೇಶಗಳು ಇವೆ. ಎಲ್ಲರಿಗು ತಿಳಿದಿರುವಂತೆ ಲೋಕ ಕಲ್ಯಾಣಕ್ಕಾಗಿ ಮನ್ಮಥ ಶಿವನಿಂದ ದಹಿಸಿ ಹೋಗುತ್ತಾನೆ. ರತಿ ಮಹದೇವನನ್ನು ಪ್ರಾರ್ಥಿಸಿದಾಗ ರತಿಗೆ “ನಿನ್ನ ಪತಿ ಸದಾ ನಿನ್ನೊಂದಿಗೆ ಇರುತ್ತಾನೆ” ಚಿಂತಿಸಬೇಡ ಎಂದು ವರ ನೀಡುತ್ತಾನೆ. ದಹಿಸಿಹೋದ ಮನ್ಮಥ ಈ ಕಾವ್ಯದಲ್ಲಿ ಪ್ರದ್ಯುಮ್ನನಾಗಿ ಅವತರಿಸುತ್ತಾನೆ. ರತಿ ಮತ್ತು ಕಾಮನ ಅಥಾರ್ಥ್ ಪ್ರದ್ಯುಮ್ನನ ಸಮ್ಮಿಲನ ಆಗುತ್ತದೆ. ಇವರಿಬ್ಬರ ದಾಂಪತ್ಯದ ಫಲವಾಗಿ ಅನಿರುದ್ಧ ಹುಟ್ಟುತ್ತಾನೆ. ಇಲ್ಲಿ ಕೃಷ್ಣ-ರುಕ್ಮಿಣಿ, ಪ್ರದ್ಯುಮ್ನ-ರತಿ ಹಾಗೂ ಅನಿರುದ್ಧ-ಉಷೆಯರ ಮೂಲಕ ದಾಂಪತ್ಯದ ಶೃಂಗಾರ ರಸದ ಕಥೆ ಚಿತ್ರ ವರ್ಣಿತವಾಗಿದೆ. ಜೊತೆಗೆ ನವರಸಗಳಲ್ಲಿ ಕಂಡುಬರುವ ಶೋಕ, ಶೃಂಗಾರ, ವೀರ, ರೌದ್ರ, ಕರುಣ, ಬೀಬತ್ಸಾದಿ ರಸಗಳಿಗೂ ಇಲ್ಲಿ ಕವಿ ಸ್ಥಾನ ಕೊಟ್ಟಿರುತ್ತಾರೆ. ರುಕ್ಮಿಣಿಯ ಶಿಶು ವಾತ್ಸಲ್ಯ, ರತಿಯ ತೀವ್ರ ಬಯಕೆ, ಉಷೆಯ ಶಿವಭಕ್ತಿ, ಈ ಮೂರು ಈ ಕಾವ್ಯಗಳಲ್ಲಿ ಮುಪ್ಪುರಿಗೊಂಡಿದೆ. ಬೇರೆ ರಚನೆಗಳಿಗೆ ಹೋಲಿಸಿದ್ದಲ್ಲಿ ಮೋಹನ ತರಂಗಿಣಿ ಕಾವ್ಯ, ಸಾಂಗತ್ಯ ರೂಪದಲ್ಲಿದ್ದು, ಅಷ್ಟಾಗಿ ಜನ ಸಾಮಾನ್ಯರನ್ನು ಈವರೆಗೂ ತಲುಪಿರುವುದಿಲ್ಲ. ಅಚ್ಚಗನ್ನಡ ದೇಸೀ ಛಂದಸ್ಸಿನ ಈ ಕಾವ್ಯ ಹಾಡುವುದು ಎಲ್ಲರಿಗು ಇಷ್ಟವಾಗುತ್ತದೆ.

ಈ ಹಿನ್ನೆಲೆಯಲ್ಲಿ ‘ಕನಕ ಮನೆ ಮನೆ ತನಕ’ ಎಂಬ ಶೀರ್ಷಿಕೆಯಡಿ ಮೋಹನ ತರಂಗಿಣಿ ಕಾವ್ಯದ ವಿಸ್ತೃತ ಪ್ರಚಾರವನ್ನು ನಾಡಿನಾದ್ಯಂತ ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಕೇಂದ್ರೀಕೃತ ಮಾಡಿಕೊಂಡು ಜನರಿಗೆ ತಲುಪಿಸುವ ಮಹದುದ್ದೇಶ ಕನಕ ಅಧ್ಯಯನ ಕೇಂದ್ರದ್ದಾಗಿದೆ.

ಡಾ. ಕಬ್ಬಿನಾಲೆ ವಸಂತ ಭಾರಧ್ವಾಜ್, ಮೈಸೂರು ಅವರು ಸಾಹಿತ್ಯವನ್ನು ಸಿದ್ಧಪಡಿಸಿದ್ದು, ರಾಗ ಸಂಯೋಜಕರಾದ ಶ್ರೀ ಗಣೇಶ್ ದೇಸಾಯಿ, ಬೆಂಗಳೂರು ಅವರಿಂದ ರಾಗ ಸಂಯೋಜಿಸಿದ್ದು, ನೃತ್ಯ ಸಂಯೋಜನೆಯನ್ನು ವಿದುಷಿ ಶ್ರೀಮತಿ ರೂಪ ರಾಜೇಶ್ ಅವರು ನಿರ್ವಹಿಸಿದ್ದಾರೆ. ಕನಕ ನೃತ್ಯ ರೂಪಕ – ಮೋಹನ ತರಂಗಿಣಿ ನೃತ್ಯ ವೈಭವ ಕಾರ್ಯಕ್ರಮದ ಪರಿಕಲ್ಪನೆ ಶ್ರೀ ಎಂ.ಆರ್. ಸತ್ಯನಾರಾಯಣ ಅವರದ್ದಾಗಿದೆ.

ಇತ್ತೀಚಿನ ನವೀಕರಣ​ : 02-09-2021 02:53 PM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080