ಅಭಿಪ್ರಾಯ / ಸಲಹೆಗಳು

2) ರಸಗ್ರಹಣ ಶಿಬಿರ ಕಮ್ಮಟಗಳು

II ಕನಕ ಸಂಸ್ಕೃತಿ ಕಮ್ಮಟ ಮತ್ತು ರಸಗ್ರಹಣ ಶಿಬಿರಗಳು

ಕನಕ ಓದು:

       ಕನಕದಾಸರ ಜೀವನ ದರ್ಶನ ಮತ್ತು ಕಾವ್ಯ ಸಂದೇಶಗಳನ್ನು ಚರ್ಚಿಸುವ ಹಾಗೂ ಪ್ರಧಾನವಾಗಿ ಕನಕದಾಸ ಕಾವ್ಯಗಳನ್ನು ಓದುವ ಕ್ರಮವನ್ನು ಗ್ರಹಿಸುವ ಎರಡು ದಿನಗಳ ಕಮ್ಮಟವನ್ನು ವಿದ್ಯಾರ್ಥಿಗಳಿಗಾಗಿ ಸಂಘಟಿಸಲಾಗುತ್ತಿದೆ. `ಕನಕ ಓದು’ ಶಿಬಿರಕ್ಕೆ ಆಹ್ವಾನಿಸುವ ವಿದ್ಯಾರ್ಥಿ ಹಾಗೂ ಉಪನ್ಯಾಸಕರಿಗೆ ಮುಂಚಿತವಾಗಿ ಈ ಉದ್ದೇಶಕ್ಕಾಗಿ ಸಿದ್ಧಪಡಿಸಿರುವ `ಕನಕ ಓದು’ ಎಂಬ ಪುಸ್ತಕವನ್ನು ಕಳುಹಿಸಲಾಗುತ್ತದೆ. ಅವರು ಪೂರ್ವಸಿದ್ಧತೆಯೊಂದಿಗೆ ಓದಿಕೊಂಡು ಬಂದು ಕಾವ್ಯವನ್ನು ಓದುವ, ವ್ಯಾಖ್ಯಾನಿಸುವ, ಅರ್ಥವಿಶ್ಲೇಷಣೆ ಮಾಡುವ ಬಗೆಗಳನ್ನು, ಪರಸ್ಪರ ಓದುವ, ಚರ್ಚಿಸುವ ಮತ್ತು ಗ್ರಹಿಸುವ ಮೂಲಕ ಮನದಟ್ಟು ಮಾಡಿಕೊಡಲಾಗುತ್ತದೆ. ಈ ಅರಿವಿನ ಶಿಬಿರ ೨೦೧೬ನೆಯ ಸಾಲಿನಿಂದ ಆರಂಭವಾಗಿದೆ. ವಿವರಗಳು ಇಂತಿವೆ: (ಕನಕ ಸಂಸ್ಕೃತಿ ಕಮ್ಮಟ ಮತ್ತು ಕನಕ ಓದು ಸೇರಿ ಒಟ್ಟು ೮೬ ಶಿಬಿರಗಳು)
ಕಾರ್ಯಪ್ರಗತಿ : ವಿವಿಧ ೮೬ ಸ್ನಾತಕೋತ್ತರ ಕೇಂದ್ರ ಹಾಗೂ ಪದವಿ ಕಾಲೇಜುಗಳು, ಸುಮಾರು ೧೫,೪೩೭ ಜನ ಅಧ್ಯಾಪಕರು ಸೇರಿದಂತೆ ವಿದ್ಯಾರ್ಥಿಗಳು ಭಾಗಿ.

 

ಮುತ್ತು ಬಂದಿದೆ ಕೇರಿಗೆ:

ಶಾಲಾ ಕಾಲೇಜುಗಳಲ್ಲಿ ಕನಕದಾಸರ ಕಾವ್ಯಗಳ ವಾಚನ, ಗಾಯನ ಮತ್ತು ತನ್ಮೂಲಕ ಕನಕದಾಸರ ಬಗ್ಗೆ ವಿದ್ಯಾರ್ಥಿ ವೃಂದಗಳಲ್ಲಿ ಜಾಗೃತಿ ಮೂಡಿಸುವ ರಸಗ್ರಹಣ ಶಿಬಿರಗಳನ್ನು ಏರ್ಪಡಿಸಲಾಗುತ್ತಿದೆ. ಅರ್ಧದಿನದ ಈ ಶಿಬಿರದಲ್ಲಿ ಒಬ್ಬ ವಿದ್ವಾಂಸರು ಕನಕದಾಸರ ಕುರಿತು ಪರಿಚಯ ಉಪನ್ಯಾಸ ನೀಡುತ್ತಾರೆ. ಜೊತೆಜೊತೆಯಲ್ಲಿ ಸಂಗೀತ ಕಲಾವಿದರು ಕನಕದಾಸರ ಕಾವ್ಯ ಕೀರ್ತನೆಗಳನ್ನು ಹಾಡುತ್ತಾರೆ. ಹೀಗೆ ಮಾತು ಮತ್ತು ಹಾಡುಗಳ ಮೂಲಕ ಕನಕದಾಸರ ವೈಶಿಷ್ಟ್ಯವನ್ನು ವಿದ್ಯಾರ್ಥಿ ಸಮುದಾಯದಲ್ಲಿ ಪರಿಚಯಿಸುವುದು ಈ ಯೋಜನೆಯ ಆಶಯ. ಈ ಶಿಬಿರಗಳನ್ನು ರಾಜ್ಯಾದ್ಯಂತ ೧೦೮ ಕಾಲೇಜುಗಳಲ್ಲಿ ಈವರೆಗೆ ನಡೆಸಲಾಗಿದೆ. ಸುಮಾರು ೨೬,೦೦೦ ವಿದ್ಯಾರ್ಥಿಗಳು ಇದರ ಫಲಾನುಭವಿಗಳಾಗಿದ್ದಾರೆ.
ಕಾರ್ಯಪ್ರಗತಿ : ಕಾಸರಗೋಡು ಸೇರಿದಂತೆ ರಾಜ್ಯಾದ್ಯಂತ ೧೦೮ ಕಾಲೇಜುಗಳಲ್ಲಿ ಶಿಬಿರಗಳು, ಸುಮಾರು ೨೬,೦೦೦ ವಿದ್ಯಾರ್ಥಿಗಳು ಭಾಗಿ.

 

ಕನಕ ಕಾವ್ಯ ಗಮಕ ವ್ಯಾಖ್ಯಾನ ಶಿಬಿರ:

ವಿದ್ಯಾರ್ಥಿಗಳಿಗೆ ಹಾಗೂ ಯುವ ಸಮುದಾಯಕ್ಕಾಗಿ ಕನಕದಾಸರ ಕಾವ್ಯಗಳನ್ನು ಗಮಕದಲ್ಲಿ ವಿದ್ವಾಂಸರಿಂದ ಹಾಡಿಸಿ ಅವುಗಳ ವ್ಯಾಖ್ಯಾನ ಮಾಡುವುದು.
ಕಾರ್ಯಪ್ರಗತಿ: ವಿವಿಧ ೧೨ ಪದವಿ ಕಾಲೇಜುಗಳು, ಸುಮಾರು ೧,೯೫೨ ಜನ ಗಮಕ ಕಲಾವಿದರು ಹಾಗೂ ವಿದ್ಯಾರ್ಥಿಗಳು ಭಾಗಿ.

 

ಕನಕ ಮನೆ ಮನೆ ತನಕ - ಕನಕದಾಸರ ಕಾವ್ಯ ಕೃತಿಗಳ ಕಾರ್ಯಾಗಾರ :

ಕನಕದಾಸರು ಕನ್ನಡ ಸಾಹಿತ್ಯ–ಸಂಸ್ಕೃತಿಯಲ್ಲಿ ಚಿರಸ್ಥಾಯಿಯಾಗಿ ನೆಲೆನಿಂತ ವ್ಯಕ್ತಿವಿಶೇಷ. ಇವರು ಶ್ರೇಷ್ಠ ಹರಿಭಕ್ತರು, ಸಂತರು, ಕವಿಗಳು, ಕ್ರಾಂತಿಕಾರಿಯಾಗಿ ಹಾಗೂ ಸಾಮಾಜಿಕ ಕಳಕಳಿಯುಳ್ಳ ಮಾನವತವಾದಿ. ಕನಕದಾಸರ ಕಾವ್ಯ ಮತ್ತು ಕೀರ್ತನೆಗಳಲ್ಲಿ ಸಾಂಸ್ಕೃತಿಕ ಸಂವೇದನಾ ಶೀಲತೆಯನ್ನು ದಟ್ಟವಾಗಿ ಕಾಣಬಹುದು. ಪ್ರಸ್ತುತ ‘ಕನಕ ಮನೆ ಮನೆ ತನಕ’ ಎಂಬ ಶೀರ್ಷಿಕೆಯಡಿಯಲ್ಲಿ ಕನಕದಾಸರ ಕಾವ್ಯ ಕೃತಿಗಳನ್ನು ಪ್ರಚುರಪಡಿಸುವ ಉದ್ದೇಶದಿಂದ ಮೂರು ದಿನಗಳ ಕಾರ್ಯಾಗಾರವನ್ನು ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಹಾಗೂ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್, ಕೃಷ್ಣಾಪುರ ದೊಡ್ಡಿ, ರಾಮನಗರ ತಾಲ್ಲೂಕು ಮತ್ತು ಜಿಲ್ಲೆ ಇವರ ಸಹಯೋಗದಲ್ಲಿ 2021ನೇ ಮಾರ್ಚ್ 12, 13 ಮತ್ತು 14 ರಂದು ಮುದ್ದುಶ್ರೀ ದಿಬ್ಬ, ಕೆರೆಮೇಗಳದೊಡ್ಡಿ, ರಾಮನಗರ ತಾಲ್ಲೂಕು ಮತ್ತು ಜಿಲ್ಲೆ ಇಲ್ಲಿ ಏರ್ಪಡಿಸಲಾಗಿತ್ತು. ಈ ಕಾರ್ಯಾಗಾರದ ಅಧ್ಯಕ್ಷತೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಶ್ರೀ ಎಸ್. ರಂಗಪ್ಪ ಅವರು ವಹಿಸಿದ್ದರು. ಉದ್ಘಾಟನೆಯನ್ನು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪ್ರೊ. ಮಲ್ಲೇಪುರಂ .ಜಿ. ವೆಂಕಟೇಶ್ ಅವರು ನೆರವೇರಿಸಿದರು. ಕನಕ ಅಧ್ಯಯನ ಕೇಂದ್ರದ ಸಮನ್ವಯಾಧಿಕಾರಿಗಳಾದ ಶ್ರೀ ಎಂ.ಆರ್. ಸತ್ಯನಾರಾಯಣ ಅವರು ಹಾಗೂ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟಿನ ಅಧ್ಯಕ್ಷರಾದ ಡಾ. ಎಂ. ಭೈರೇಗೌಡರು ಉಪಸ್ಥಿತರಿದ್ದರು. ಕನಕದಾಸರ ಕಾವ್ಯ ಕೃತಿಗಳ ಕಲಿಕೆಯನ್ನು ಸಂಗೀತ ದಿಗ್ಗಜರಾದ ಡಾ. ಸುಕನ್ಯಾ ಪ್ರಭಾಕರ್ ಮತ್ತು ಶ್ರೀ ಪುತ್ತೂರು ನರಸಿಂಹನಾಯಕ ಇವರುಗಳಿಂದ ತರಬೇತಿಕೊಡಿಸಲಾಯಿತು. ಈ ಕಾರ್ಯಾಗಾರದಲ್ಲಿ ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಿಂದ 40 ಮಂದಿ ಆಸಕ್ತ ವಿದ್ಯಾರ್ಥಿಗಳು ಭಾಗವಹಿಸಿದ್ದು, ಕನಕದಾಸರ ಹಲವು ಕಾವ್ಯಗಳನ್ನು ಹಾಡುವ ಮೂಲಕ ಕಾರ್ಯಾಗಾರವು ಯಶಸ್ವಿಯನ್ನು ಕಂಡಿತು.

 

 

 

 

 

 

 

 

 

ಕನಕ ಮನೆ ಮನೆ ತನಕ - ಕನಕ ಕೀರ್ತನ ಕಾರ್ಯಾಗಾರ :

       ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಬೆಂಗಳೂರು ಮತ್ತು ಭಾರತೀಯ ವಿದ್ಯಾ ಭವನ, ಬೆಂಗಳೂರು ಈ ಎರಡು ಸಂಸ್ಥೆಗಳ ಸಹಯೋಗದಲ್ಲಿ ದಿನಾಂಕ:೬.೧೨.೨೦೨೧ ರಿಂದ ೧೦.೧೨.೨೦೨೧ರವರೆಗೆ ಅಂದರೆ ೫ ದಿನಗಳ ಕಾಲ ಕನಕ ಮನೆ ಮನೆ ತನಕ ಕಾರ್ಯಕ್ರಮದಡಿಯಲ್ಲಿ ಕನಕ ಕೀರ್ತನಾ ಕಾರ್ಯಗಾರವನ್ನು ರೇಸ್ ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾ ಭವನದಲ್ಲಿ ಆಯೋಜಿಸಲಾಗಿತ್ತು.

         ಕನಕದಾಸರ ಅಪೂರ್ವ ಹಾಗೂ ಈವರೆಗೆ ಅಷ್ಟಾಗಿ ಪ್ರಚಾರ ಪಡೆಯದ ಕೆಲವು ಕೀರ್ತನೆಗಳನ್ನು ನುರಿತ ಹಾಗೂ ಹೆಸರಾಂತ ವಿದ್ವಾಂಸರುಗಳಾದ ಡಾ. ಟಿ.ಎಸ್ ಸತ್ಯವತಿ, ಬೆಂಗಳೂರು ಮತ್ತು ಶ್ರೀ ಶಂಕರ್ ಶ್ಯಾನುಭೋಗ್, ಬೆಂಗಳೂರು ಇವರಿಂದ ತರಬೇತಿ ನೀಡಲಾಗಿತ್ತು. ಈ ಕಾರ್ಯಾಗಾರದಲ್ಲಿ ೫೦ ಮಂದಿ ಆಸಕ್ತರು ನೊಂದಾಯಿಸಿಕೊಂಡು ಈ ಶಿಬಿರದ ಸದುಪಯೋಗವನ್ನು ಪಡೆದುಕೊಂಡರು.

 

 

 

 

 

 

 

 

 

 

 

 

 

 

 

 

 

 

 

ಕನಕ ಮನೆ ಮನೆ ತನಕ - ಕನಕ ನೃತ್ಯ ರೂಪಕ – ಮೋಹನ ತರಂಗಿಣಿ ನೃತ್ಯ ವೈಭವ :

       ಕನಕದಾಸರ ಮೋಹನ ತರಂಗಿಣಿ ಎಂಬ ಸಾಂಗತ್ಯ ಕಾವ್ಯ ಒಂದು ಶೃಂಗಾರ ರಸದ ಸೃಷ್ಟಿ. ಈ ಕಾವ್ಯದಲ್ಲಿ ಕೃಷ್ಣ-ರುಕ್ಮಿಣಿ, ಮನ್ಮಥ-ರತಿ, ಅನಿರುದ್ಧ-ಉಷೆ ಇವರ ದಾಂಪತ್ಯದ ರಸ ಸನ್ನಿವೇಶಗಳು ಇವೆ. ಎಲ್ಲರಿಗು ತಿಳಿದಿರುವಂತೆ ಲೋಕ ಕಲ್ಯಾಣಕ್ಕಾಗಿ ಮನ್ಮಥ ಶಿವನಿಂದ ದಹಿಸಿ ಹೋಗುತ್ತಾನೆ. ರತಿ ಮಹದೇವನನ್ನು ಪ್ರಾರ್ಥಿಸಿದಾಗ ರತಿಗೆ “ನಿನ್ನ ಪತಿ ಸದಾ ನಿನ್ನೊಂದಿಗೆ ಇರುತ್ತಾನೆ” ಚಿಂತಿಸಬೇಡ ಎಂದು ವರ ನೀಡುತ್ತಾನೆ. ದಹಿಸಿಹೋದ ಮನ್ಮಥ ಈ ಕಾವ್ಯದಲ್ಲಿ ಪ್ರದ್ಯುಮ್ನನಾಗಿ ಅವತರಿಸುತ್ತಾನೆ. ರತಿ ಮತ್ತು ಕಾಮನ ಅಥಾರ್ಥ್ ಪ್ರದ್ಯುಮ್ನನ ಸಮ್ಮಿಲನ ಆಗುತ್ತದೆ. ಇವರಿಬ್ಬರ ದಾಂಪತ್ಯದ ಫಲವಾಗಿ ಅನಿರುದ್ಧ ಹುಟ್ಟುತ್ತಾನೆ. ಇಲ್ಲಿ ಕೃಷ್ಣ-ರುಕ್ಮಿಣಿ, ಪ್ರದ್ಯುಮ್ನ-ರತಿ ಹಾಗೂ ಅನಿರುದ್ಧ-ಉಷೆಯರ ಮೂಲಕ ದಾಂಪತ್ಯದ ಶೃಂಗಾರ ರಸದ ಕಥೆ ಚಿತ್ರ ವರ್ಣಿತವಾಗಿದೆ. ಜೊತೆಗೆ ನವರಸಗಳಲ್ಲಿ ಕಂಡುಬರುವ ಶೋಕÀ, ಶೃಂಗಾರ, ವೀರ, ರೌದ್ರ, ಕರುಣ, ಬೀಬತ್ಸಾದಿ ರಸಗಳಿಗೂ ಇಲ್ಲಿ ಕವಿ ಸ್ಥಾನ ಕೊಟ್ಟಿರುತ್ತಾರೆ. ರುಕ್ಮಿಣಿಯ ಶಿಶು ವಾತ್ಸಲ್ಯ, ರತಿಯ ತೀವ್ರ ಬಯಕೆ, ಉಷೆಯ ಶಿವಭಕ್ತಿ, ಈ ಮೂರು ಈ ಕಾವ್ಯಗಳಲ್ಲಿ ಮುಪ್ಪುರಿಗೊಂಡಿದೆ. ಬೇರೆ ರಚನೆಗಳಿಗೆ ಹೋಲಿಸಿದ್ದಲ್ಲಿ ಮೋಹನ ತರಂಗಿಣಿ ಕಾವ್ಯ, ಸಾಂಗತ್ಯ ರೂಪದಲ್ಲಿದ್ದು, ಅಷ್ಟಾಗಿ ಜನ ಸಾಮಾನ್ಯರನ್ನು ಈವರೆಗೂ ತಲುಪಿರುವುದಿಲ್ಲ. ಅಚ್ಚಗನ್ನಡ ದೇಸೀ ಛಂದಸ್ಸಿನ ಈ ಕಾವ್ಯ ಹಾಡುವುದು ಎಲ್ಲರಿಗು ಇಷ್ಟವಾಗುತ್ತದೆ.

        ಈ ಹಿನ್ನೆಲೆಯಲ್ಲಿ ‘ಕನಕ ಮನೆ ಮನೆ ತನಕ’ ಎಂಬ ಶೀರ್ಷಿಕೆಯಡಿ ಮೋಹನ ತರಂಗಿಣಿ ಕಾವ್ಯದ ವಿಸ್ತೃತ ಪ್ರಚಾರವನ್ನು ನಾಡಿನಾದ್ಯಂತ ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಕೇಂದ್ರೀಕೃತ ಮಾಡಿಕೊಂಡು ಜನರಿಗೆ ತಲುಪಿಸುವ ಮಹದುದ್ದೇಶ ಕನಕ ಅಧ್ಯಯನ ಕೇಂದ್ರದ್ದಾಗಿದೆ.

    ಸುಮಾರು ೪೫ ರಿಂದ ೬೦ ನಿಮಿಷಗಳ ಅವಧಿಯ ಮೋಹನ ತರಂಗಿಣಿ ನೃತ್ಯ ರೂಪಕದ ಧ್ವನಿ ಸಾಂದ್ರಿಕೆಯನ್ನು ಸಿದ್ಧಪಡಿಸಿ, ದಿನಾಂಕ:೨೨-೧೧-೨೦೨೧ ರಂದು ಸಂಜೆ ೫:೦೦ ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದ್ದ ‘ಕನಕ ಜಯಂತಿ’ ಕಾರ್ಯಕ್ರಮದಲ್ಲಿ ‘ಮೋಹನ ತರಂಗಿಣಿ’ ನೃತ್ಯ ರೂಪಕವನ್ನು ಪ್ರದರ್ಶಿಸಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಪಾಲ್ಗೊಂಡು ಜನಮೆಚ್ಚುಗೆಯನ್ನು ಪಡೆಯುವ ಮೂಲಕ ನೃತ್ಯ ರೂಪಕವು ಯಶಸ್ವಿಯನ್ನು ಕಂಡಿತು.

 

 

 

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

ಕಾರ್ಯಕ್ರಮದ ವೀಡಿಯೋ ವೀಕ್ಷಣೆಗಾಗಿ ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ

 
 
 

ಕನಕ ಮನೆ ಮನೆ ತನಕ - ‘ನಿರಂತರ ಕನಕ’ ಕಾರ್ಯಕ್ರಮ :

         ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವು ಸಂಗೀತ ಸಂಭ್ರಮ ಸಂಸ್ಥೆಯ ಸಹಯೋಗದೊಂದಿಗೆ ೨೦೨೨ನೇ ಜನವರಿ ೪, ೫ ಮತ್ತು ೬ ರವರೆಗೆ ಮೂರು ದಿನಗಳ ಕಾಲ ಕನಕ ಮನೆ ಮನೆ ತನಕ ಶಿರ್ಷಿಕೆಯಡಿ ‘ನಿರಂತರ ಕನಕ’ ಎಂಬ ಕಾರ್ಯಕ್ರಮವನ್ನು ಬೆಂಗಳೂರಿನ ನಯನ ಸಭಾಂಗಣ ಹಾಗೂ ಗಾಯನ ಸಮಾಜ ಈ ಎರಡು ವೇದಿಕೆಗಳಲ್ಲಿ ಏರ್ಪಡಿಸಲಾಗಿತ್ತು.

        ನಾಡಿನ ಹಾಗೂ ರಾಷ್ಟ್ರ ಖ್ಯಾತಿವೆತ್ತ ಕಲಾವಿದರುಗಳು ನಿರಂತರ ಕನಕದಲ್ಲಿ ಮೂರು ದಿನಗಳ ಪರ್ಯಂತ ಸಂತಕವಿ ಕನಕದಾಸರ ಕೃತಿಗಳನ್ನು ಹಾಗೂ ಕಾವ್ಯಗಳನ್ನು ಹಾಡಿ ರಂಜಿಸಿದರು. ಈ ಒಂದು ಬೃಹತ್ ಯೋಜನೆಯಲ್ಲಿ ಮುಖ್ಯ ಗಾಯಕರಾಗಿ ೩೫ ಜನ ಕಲಾವಿದರು, ಪಕ್ಕ ವಾದ್ಯದಲ್ಲಿ ೩೫ ಕಲಾವಿದರು ಭಾಗವಹಿಸಿದ್ದರು. ಅಲ್ಲದೆ, ಗಾಯನ ಸಮಾಜದಲ್ಲಿ ಕೊನೆಯ ದಿನ ಸುಮಾರು ೨೦೦ ಜನ ವೃಂದ ಗೋಷ್ಠಿ ಗಾಯನದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ವಿಶೇಷ ಆಕರ್ಷಣೆ ಎಂದರೆ ನೃತ್ಯ ಕಲಾವಿದೆ ಪ್ರತಿಭಾ ಪ್ರಹ್ಲಾದ್. ಇವರು ಕನಕ ಕೃತಿಯನ್ನು ಪ್ರದರ್ಶಿಸಿದರು. ಇವರಲ್ಲದೆ, ಮತ್ತೊಬ್ಬ ಶ್ರೇಷ್ಠ ನೃತ್ಯ ಕಲಾವಿದೆ ಡಾ. ವಸುಂಧರಾ ದೊರೆಸ್ವಾಮಿ ಇವರು ನೃತ್ಯ ಪ್ರದರ್ಶನವನ್ನು ನೀಡಿದರು. ಕಾರ್ಯಕ್ರಮವು ಅದ್ದೂರಿ ಪ್ರದರ್ಶನದೊಂದಿಗೆ ಯಶಸ್ವಿಯನ್ನು ಕಂಡಿತು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

ಕನಕ ಮನೆ ಮನೆ ತನಕ - ‘ಕನಕ ಸಾಹಿತ್ಯ ಸಮ್ಮೇಳನ’

          ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವು ಕನಕದಾಸ ಸಂಶೋಧನಾ ಕೇಂದ್ರ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳೂರು ಇವರ ಸಹಯೋಗದೊಂದಿಗೆ ಮಂಗಳ ಸಭಾಂಗಣ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳ ಗಂಗೋತ್ರಿ, ಮಂಗಳೂರು ಇಲ್ಲಿ 2022ನೇ ಜುಲೈ 22 ಮತ್ತು 23 ರಂದು ಎರಡು ದಿನಗಳು ಕನಕ ಮನೆ ಮನೆ ತನಕ ಶೀರ್ಷಿಕೆಯಡಿ ಕನಕ ಸಾಹಿತ್ಯ ಸಮ್ಮೇಳನವನ್ನು ಏರ್ಪಡಿಸಲಾಗಿತ್ತು.

       ಸದರಿ ಸಮ್ಮೇಳನದಲ್ಲಿ ಕನಕ ಕೀರ್ತನೆಗಳ ಗಾಯನ, ವಿಚಾರ ಗೋಷ್ಠಿ, ಕನಕ ಗಮಕ ವ್ಯಾಖ್ಯಾನ, ಕನಕ ಗೊಂಬೆಯಾಟ, ಕನಕ ಸಂಗೀತ, ಕನಕ ಕವಿಗೋಷ್ಠಿ, ಕನಕ ಕಾವ್ಯ-ಗೀತ-ನೃತ್ಯ ಸಾಧ್ಯತೆಗಳು, ವಿಚಾರ ಸಂಕಿರಣ, ಕನಕ ಯಕ್ಷಗಾನ ಹೀಗೆ ಹಲವು ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸುಮಾರು ಒಂದು ಸಾವಿರಕ್ಕು ಹೆಚ್ಚು ಜನ ಭಾಗವಹಿಸುವ ಮೂಲಕ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿAದ ನಡೆದು ಯಶಸ್ವಿಯನ್ನು ಕಂಡಿತು.

 

 

 

 

 

 

 

 

 

 

 

 

 

 

 

 

ಕಾರ್ಯಕ್ರಮದ ವೀಡಿಯೋ ವೀಕ್ಷಣೆಗಾಗಿ ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ

 

 

Kanaka Sahitya Sammelana Part 01

Kanaka Sahitya Sammelana Part 02

Kanaka Sahitya Sammelana Part 03

Kanaka Sahitya Sammelana Part 04

Kanaka Sahitya Sammelana Part 05

Kanaka Sahitya Sammelana Part 06

Kanaka Sahitya Sammelana Part 07

Kanaka Sahitya Sammelana Part 08

Kanaka Sahitya Sammelana Part 09

Kanaka Sahitya Sammelana Part 10

Kanaka Sahitya Sammelana Part 11

Kanaka Sahitya Sammelana Part 12

Kanaka Sahitya Sammelana Part 13

Kanaka Sahitya Sammelana Part 14

Kanaka Sahitya Sammelana Part 15

 

 

 

ಇತ್ತೀಚಿನ ನವೀಕರಣ​ : 15-11-2022 01:08 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080