ಈವರೆಗೆ ಈ ಯೋಜನೆಯಡಿ ಪ್ರಯೋಜನ ಪಡೆದವರು ಮತ್ತು ಸಿದ್ಧವಾದ ಕೃತಿಗಳ ವಿವರ ಇಂತಿದೆ:
೧. ಕನಕದಾಸರ ಕೃತಿಗಳ ಸಂಪಾದನೆಯ ಸಾಂಸ್ಕೃತಿಕ ರಾಜಕಾರಣ (ಪ್ರಕಟ)
– ಸಂಶೋಧನಾರ್ಥಿ : ಡಾ. ಆರ್.ಚಲಪತಿ, ಮಾರ್ಗದರ್ಶಕರು : ಡಾ. ಅಶೋಕಕುಮಾರ್ ರಂಜೇರೆ
೧೮೫೦ನೆಯ ಇಸವಿಗೂ ಮೊದಲೇ ಪ್ರಾರಂಭವಾದ ಕನಕದಾಸರ ಸಾಹಿತ್ಯ ಸಂಪಾದನೆಯು ಸುಮಾರು ನೂರಾಎಪ್ಪತ್ತು ವರುಷಗಳ ಉದ್ದಕ್ಕೂ ಸಂಪಾದನೆಗೆ ಒಳಗಾಗುತ್ತಾ ಪ್ರಕಟಗೊಳ್ಳುತ್ತಾ ಬಂದಿದೆ. ಕನಕದಾಸರ ಸಾಹಿತ್ಯ ಸಂಪಾದನೆಯ ಈ ಸಾಂಸ್ಕೃತಿಕ ಚರಿತ್ರೆಯಲ್ಲಿ ಇರುವ ಗುರಿ, ಕಂಡದಾರಿ, ಬದಲಾವಣೆಗಳು, ಅದರಿಂದ ಹುಟ್ಟಿದ ಚಿಂತನೆಗಳು, ವೈರುಧ್ಯಗಳು ಇವೆಲ್ಲವುಗಳ ಹಿನ್ನೆಲೆಯ ರಾಜಕಾರಣವನ್ನು ಇವತ್ತಿನ ಸಮಾಜ, ಕುಲ, ನೆಲ, ಬದುಕು ಬವಣೆಗಳನ್ನು ಸಾಂಸ್ಕೃತಿಕ ಹಾಗೂ ಐತಿಹಾಸಿಕ ಹಿನ್ನೆಲೆಯಲ್ಲಿ ವಿಶ್ಲೆÃಷಿಸುವ ಸಂಪ್ರಬಂಧ.
೨. ಜನಪದ ಲೋಕ ದೃಷ್ಟಿಯ ಮೂಲಕ ಕನಕ ಸಾಹಿತ್ಯ ಅಧ್ಯಯನ (ಪ್ರಕಟ)
-ಸಂಶೋಧನಾರ್ಥಿ : ಡಾ. ಸುರೇಶ ನಾಗಲಮಡಿಕೆ, ಮಾರ್ಗದರ್ಶಕರು : ಡಾ. ಹೆಚ್.ಎನ್.ಮುರಳೀಧರ
ಕನಕದಾಸರು ಪ್ರಜ್ಞಾಪೂರ್ವಕವಾಗಿ ಸ್ವಿಕರಿಸಿ ಪ್ರಚುರಪಡಿಸಲು ಪ್ರಯತ್ನಿಸಿದ ತತ್ವಗಳು ಮೇಲು ನೋಟಕ್ಕೆ ವೈಷ್ಣವ ಲೋಕ ದೃಷ್ಟಿಯಿಂದ ಪ್ರಭಾವಿತವಾಗಿರುವಂತೆ ತೋರಿದರೂ ಕನಕರ ರಚನೆಗಳ ಆಳದಲ್ಲಿ ಜನಪದ ಲೋಕದೃಷ್ಟಿಯ ನೆಲೆಗಳು ಅಂತರ್ಗತವಾಗಿವೆ. ಈ ನೆಲೆಗಳ ಮೂಲಕ ಕಟ್ಟಿಕೊಳ್ಳುವ ಕನಕರ ಸಂಬಂಧಗಳು ವೈದಿಕ ಹಾಗೂ ಹರಿಭಕ್ತಿಯ ಗ್ರಹಿಕೆಗಳಿಗಿಂತ ಹೇಗೆ ಭಿನ್ನ ಎಂದು ಕನಕರ ಸಾಹಿತ್ಯ ಕೃತಿಗಳ ಮೂಲಕ ತೋರಿಸುವುದು; ಜನಪದ ಮೂಲ ನೆಲೆಗಳನ್ನು ಅವರ ಕೃತಿಗಳು ಎಷ್ಟರ ಮಟ್ಟಿಗೆ ಗರ್ಭೀಕರಿಸಿಕೊಂಡಿವೆ ಎಂಬುದನ್ನು ನೋಡುವುದು; ಕಾಲುದಾರಿಯ ಸಂತರಾದ ಕನಕದಾಸರು ಜನಸಾಮಾನ್ಯರ ಮಧ್ಯೆ ಇದ್ದುದರಿಂದ ಜನರ ಅನುಭವ ಲೋಕವನ್ನು ವಿಶ್ಲೆÃಷಿಸುವುದು ಈ ಸಂಪ್ರಬಂಧದ ಆಶಯ.
೩. ಕನಕದಾಸರ ಕಾವ್ಯ ಮತ್ತು ಸಂಗೀತ (ಪ್ರಕಟ)
ಸಂಶೋಧನಾರ್ಥಿ : ಡಾ. ಕೆ.ಎಸ್.ಪವಿತ್ರ, ಮಾರ್ಗದರ್ಶಕರು : ಡಾ. ಟಿ.ಎನ್.ನಾಗರತ್ನ ಮತ್ತು ಡಾ ಸುಕನ್ಯ ಪ್ರಭಾಕರ
ಕನಕದಾಸರಿಗೆ ಜನಪದ ಹಾಗೂ ಶಾಸ್ತಿÃಯ ವಾದ್ಯ, ಗೀತ, ನೃತ್ಯಗಳ ಬಗ್ಗೆ ಸಾಕಷ್ಟು ಮಾಹಿತಿಯಿದ್ದುದರ ಬಗ್ಗೆ ಆಧಾರಗಳಿವೆ. ಕನಕದಾಸರ ಕಾವ್ಯದ ಬಗೆಗಿನ ಈ ಅಧ್ಯಯನವು ಶಾಸ್ತç-ಪ್ರಯೋಗಳೆರಡನ್ನು ಬಯಸುವುದರಿಂದ, ಅವರ ಕಾವ್ಯದಲ್ಲಿ ಉಲ್ಲೆÃಖವಾಗಿರುವ ಸಂಗೀತ, ನೃತ್ಯಕ್ಕೆ ಸಂಬಂಧಿಸಿದ ವಿವರವಾದ ಅಧ್ಯಯನ, ದಾಖಲೀಕರಣ, ವಿಶ್ಲೆÃಷಣೆಯ ಜೊತೆಗೆ ರಸಕ್ಕೆ ಪೂರಕವಾಗಿರುವ ಸಾಮಾಜಿಕ-ಸಾಂಸ್ಕೃತಿಕ ಅಂಶಗಳಿಗೆ ಒತ್ತು ನೀಡುವ ಸಂಗೀತ-ನೃತ್ಯಗಳ ಭಾಗಗಳನ್ನು ಗಮನಿಸುತ್ತಾ, ಪ್ರಾಯೋಗಿಕ ಉದಾಹರಣೆಗಳ ಮೂಲಕ ವಿಶ್ಲೆÃಷಿಸುವ ಸಂಪ್ರಬಂಧ.
೪. ಕನಕದಾಸರ ಭಾಷೆ ಮತ್ತು ಶೈಲಿ – ಶಾಸ್ತ್ರೀಯ ಅಧ್ಯಯನ (ಪ್ರಕಟ)
ಸಂಶೋಧನಾರ್ಥಿ : ಡಾ. ಸಿ.ಎಸ್.ಪೂರ್ಣಿಮಾ, ಮಾರ್ಗದರ್ಶಕರು : ಡಾ. ಬಿ.ಬಿ.ರಾಜಪುರೋಹಿತ
ಕನಕದಾಸರ ಕೃತಿಗಳಲ್ಲಿ ಬಳಸಿರುವ ಭಾಷೆ ಮತ್ತೆ ಶೈಲಿಯನ್ನು ಶಾಸ್ತಿçÃಯವಾಗಿ ಅಧ್ಯಯನ ಮಾಡುವುದೆಂದರೆ ಅವರ ಕಾವ್ಯ ಪ್ರತಿಭೆಯ ವೈಶಿಷ್ಟö್ಯದ ಅನಾವರಣ. ಈ ಮೂಲಕವೇ ಅವರು ಇತರ ಹರಿದಾಸರಿಗಿಂತ ಭಿನ್ನ. ಕನಕದಾಸರು ಮಧ್ಯಕಾಲೀನ ನಡುಗನ್ನಡವನ್ನೂ, ಸಾಂಗತ್ಯ ಭಾಮಿನಿ ಷಟ್ಪದಿಯನ್ನು ತಮ್ಮ ಕಾವ್ಯಗಳಲ್ಲಿ ಯಶಸ್ವಿಯಾಗಿ ಬಳಸಿದ್ದಾರೆ. ಆಡುನುಡಿಗಳ ಬಳಕೆ, ನುಡಿಗಟ್ಟುಗಳ ಬಳಕೆ, ಪ್ರಾಸದ ವೈವಿಧ್ಯ ಬಳಕೆ, ಭಾಷಿಕ ಬೆಡಗು, ವಿಭಿನ್ನ ಪದ ಪ್ರಯೋಗ, ದ್ವಿರುಕ್ತಿಗಳ ಬಳಕೆ – ಇವೆಲ್ಲವನ್ನೂ ಭಾಷಾವಿಜ್ಞಾನದ ದೃಷ್ಟಿಕೋನದಿಂದ ವಿವೇಚಿಸುವ ಸಂಪ್ರಬಂಧ.
೫. ಕನಕದಾಸರು ರೂಪಿಸಿದ ಅನುಭಾವ ಸಂಬಂಧಗಳ ಅಧ್ಯಯನ ಹಾಗೂ ಕನ್ನಡ ಸಂಸ್ಕೃತಿ ಅಧ್ಯಯನದ ಆಕರವಾಗಿ ಕನಕದಾಸರ ಕೃತಿಗಳ ಅಧ್ಯಯನ (ಪ್ರಕಟ)
ಸಂಶೋಧನಾರ್ಥಿ : ಡಾ. ಡಿ.ಸಿ.ಗೀತಾ, ಮಾರ್ಗದರ್ಶಕರು : ಎಂ.ಜಿ.ಚಂದ್ರಶೇಖರಯ್ಯ
ಕನಕದಾಸರ ಕೃತಿಗಳನ್ನು ಆಕರವಾಗಿಟ್ಟುಕೊಂಡು ಅವರ ಕಾಲಘಟ್ಟದ ಚಾರಿತ್ರಿಕ ಸಂದರ್ಭದ ಒಳಹೊರಗುಗಳನ್ನು ಗಮನಿಸುತ್ತಾ ಕನ್ನಡದ ಸಂಸ್ಕೃತಿಯನ್ನು ಮರುಕಟ್ಟಿಕೊಳ್ಳುವ ಉದ್ದೆÃಶ ಈ ಅಧ್ಯಯನದಲ್ಲಿದೆ. ಅದಕ್ಕಾಗಿ ಕನಕದಾಸರ ಕಾಲದ ಭಕ್ತಿಪರಂಪರೆ, ಸಂಸ್ಕೃತಿಯ ಸಂದರ್ಭ, ಪ್ರತಿರೋಧದ ನೆಲೆಗಳು, ಪರ್ಯಾಯ ನೆಲೆಗಳ ಶೋಧವನ್ನು ಈ ಅಧ್ಯಯನ ನಿರೀಕ್ಷಿಸಿದೆ.
೬. ಕನಕ ಕೃತಿಗಳ ಮಧ್ಯಕಾಲೀನ ಚಿರಿತ್ರೆಯ ಪುನಾರಚನೆ (ಪ್ರಕಟ)
ಸಂಶೋಧನಾರ್ಥಿ : ಡಾ. ಶುಭಾ ಮರವಂತೆ, ಮಾರ್ಗದರ್ಶಕರು : ಡಾ. ಹಿ.ಶಿ.ರಾಮಚಂದ್ರೇಗೌಡ
ಕನಕ ಕೃತಿಗಳ ಮಧ್ಯಕಾಲೀನ ಪುನಾರಚನೆಯ ಸಂಶೋಧನೆ ಮೂಲಕ ತಳಸಮುದಾಯಗಳ ಆಶಯ, ನೋವು, ತಳಮಳಗಳನ್ನು ತಿಳಿದುಕೊಳ್ಳಬೇಕಾದರೆ ಆ ಸಮುದಾಯಗಳು ಪ್ರತಿನಿಧಿಸುವ ಸೃಜನಶೀಲ ಪ್ರತಿಭೆಗಳೊಂದಿಗೆ ಮುಖಾಮುಖಿಯಾಗಿ ಅವುಗಳಲ್ಲಿರುವ ವಸ್ತುನಿಷ್ಠತೆ, ವೈಜ್ಞಾನಿಕತೆ, ಸಮಗ್ರತೆಯ ಮೂಲಕ ಮರುನಿರೂಪಣೆಗೊಳ್ಳಬೇಕಾಗಿದೆ. ಈಗಾಗಲೇ ಚರಿತ್ರೆಯಲ್ಲಿ ದಾಖಲಾಗಿ ರೂಪುಗೊಂಡಿರುವ ಏಕಪರ ನಿಲುವುಗಳನ್ನು ವಿಶ್ಲೇಷಿಸಿ ಹೊಸದಾಗಿ ಸಂಕಲನ, ವ್ಯಾಖ್ಯಾನ, ವಿಮರ್ಶೆಗೆ ಒಳಪಡಿಸಿ ನೋಡುವುದು ಚಾರಿತ್ರಿಕ ಸಂಶೋಧನೆಯ ಉದ್ದೇಶ.
೭. ಕನಕದಾಸರ ಕುರಿತ ನಾಟಕಗಳ ಸಾಂಸ್ಕೃತಿಕ ಚಲನಶೀಲತೆ (ಪ್ರಕಟ)
ಸಂಶೋಧನಾರ್ಥಿ : ಡಾ. ಸಿದ್ರಾಮ ಕಾರಣಿಕ, ಮಾರ್ಗದರ್ಶಕರು : ಡಾ. ಶಾಂತಿನಾಥ ದಿಬ್ಬದ
ಕನಕದಾಸರ ಕುರಿತಾದ ನಾಟಕಗಳ ಮೂಲಕ ಕಾಲಘಟ್ಟದಲ್ಲಿ ಆದ ಹಾಗೂ ಆಗುತ್ತಿರುವ ಬದಲಾವಣೆಗಳನ್ನು ಗುರುತಿಸಿ ವಿಶ್ಲೇಷಿಸುವ ಅಧ್ಯಯನ. ಕನಕದಾಸರ ಬಗೆಗಿನ ಎಲ್ಲ ನಾಟಕಗಳನ್ನು ಸಂಗ್ರಹಿಸಿ ಅವುಗಳ ಮೇಲೆ ಬಂದಿರುವ ವಿಮರ್ಶೆಗಳನ್ನು ಸಮೀಕ್ಷಿಸಿ ನಾಟಕಗಳನ್ನು ಜೀವನಾಧಾರಿತ, ಚಾರಿತ್ರಿಕ, ಸಾಮಾಜಿಕ, ಸಂಗೀತ – ಹೀಗೆ ಬೇರೆ ಬೇರೆ ನಿಲುವಿನಲ್ಲಿ ಅಧ್ಯಯನದ ವಿಧಾನಗಳನ್ನು ರೂಪಿಸಿಕೊಂಡು ನಾಟಕಕಾರರ ರಚನಾ ವಿಧಾನ, ದೃಷ್ಟಿಕೋನದ ವಿಭಿನ್ನ ಕ್ರಮಗಳನ್ನು ಗುರುತಿಸಿ ತೌಲನಿಕವಾಗಿ ಅಧ್ಯಯನ ನಡೆಸುವ ನಿಟ್ಟಿನಲ್ಲಿ ಸಾಂಸ್ಕೃತಿಕ ಚಲನಶೀಲತೆಯನ್ನು ಗುರುತಿಸುವುದು ಈ ಸಂಪ್ರಬಂಧದ ಉದ್ದೆÃಶ.
೮. ೨೦ನೆಯ ಶತಮಾನ ಕಂಡ ಕನಕದಾಸರು (ಪ್ರಕಟ)
ಸಂಶೋಧನಾರ್ಥಿ : ಲಕ್ಷಿö್ಮಪತಿ ಕೋಲಾರ, ಮಾರ್ಗದರ್ಶಕರು : ಡಾ. ಹೆಚ್.ಎಸ್.ರಾಘವೇಂದ್ರರಾವ್
೨೦ನೆಯ ಶತಮಾನದಲ್ಲಿ ಕನಕದಾಸರನ್ನು ಎರಡು ಬಗೆಯ ವೈರುಧ್ಯ ಅಥವಾ ಅಲೆಗಳ ನೆಲೆಯಲ್ಲಿ ಚಿತ್ರಿಸುವ ಪ್ರಯತ್ನ ನಡೆದಿದ್ದು, ಮೊದಲನೆಯದು ಮಧ್ವರ ದ್ವೆöÊತನೆಲೆ. ಎರಡನೆಯದು ಜಾತಿನಿಷ್ಠನೆಲೆಯ ಹಿನ್ನೆಲೆ. ಆದರೆ ಕನಕದಾಸರು ಯಾವುದಕ್ಕೂ ಸಿಕ್ಕಿಕೊಂಡವರಲ್ಲ. ಅವರೊಬ್ಬ ವಿಶ್ವಮಾನವ ನೆಲೆಯ ಮಹಾನ್ ಸಂತರೆಂಬ ವಾಸ್ತವ ಸತ್ಯವನ್ನು ಸಂಶೋಧನೆಗಳ ಮೂಲಕ ೨೦ನೆಯ ಶತಮಾನ ಗುರುತಿಸುತ್ತಾ ಬಂದಿದೆ. ಕನಕದಾಸರು ಸಾಮಾಜಿಕ ಎಚ್ಚರದ ಕವಿ. ಅವರು ಜಾತಿ ವಿನಾಶ ಹಾಗೂ ವರ್ಗಸಮರದ ಪರಿಕಲ್ಪನೆಯ ಬೀಜವನ್ನು ತನ್ನ ಕಾಲಘಟ್ಟದಲ್ಲಿಯೇ ಎಚ್ಚರದ ಮನಸ್ಥಿತಿಯಲ್ಲಿ ಬಿತ್ತಿದ ಹರಿಕಾರ. ಒಟ್ಟಾರೆಯಾಗಿ ರಾಷ್ಟಿçÃಯ ಆಂದೋಲನದ ಭಾವೈಕ್ಯತೆಗೆ, ಸಮಾಜವಾದಿ ಆಂದೋಲನಗಳೆಲ್ಲವುಗಳ ಮೇಲೂ ಗಾಢ ಪ್ರಭಾವವನ್ನು ಬೀರಿದ ಸಾಂಸ್ಕೃತಿಕ ಶಕ್ತಿಯ ಆಕರಗಳನ್ನು ಕನಕದಾಸರ ವ್ಯಕ್ತಿತ್ವ, ಅವರ ಕೃತಿಗಳ ಮೂಲ ಆಶಯದಿಂದ ವಿವೇಚಿಸುವುದು ಈ ಸಂಪ್ರಬಂಧದ ಆಶಯ.
೯. ಕನಕದಾಸರು ಮತ್ತು ಪಶುಪಾಲನಾ ಪರಂಪರೆ (ಪ್ರಕಟ)
ಸಂಶೋಧನಾರ್ಥಿ : ಎಸ್.ಕೃಷ್ಣಪ್ಪ, ಮಾರ್ಗದರ್ಶಕರು : ಡಾ. ಜಿ.ವಿ.ಆನಂದಮೂರ್ತಿ
ಕನಕದಾಸರು ತಮ್ಮ ಬದುಕಿನುದ್ದಕ್ಕೂ ಕೃಷಿ ಸಂಸ್ಕೃತಿಯ ಎಲ್ಲ ಅನುಭವಗಳನ್ನು ಸಂಕೇತಗಳಾಗಿ, ರೂಪಕಗಳಾಗಿ, ಹೋಲಿಕೆಗಳಾಗಿ ಬಳಸಿದ್ದಾರೆ. ಕಾಡು, ಕೃಷಿ ಉಪಕರಣ, ಪಶುಪಕ್ಷಿ, ಕೃಷಿಬೆಳೆಗಳು, ಕೆರೆ, ಕಾಲುವೆ, ಗೋಶಾಲೆ, ಗಾಂಧಾರ ಮುಂತಾದ ಪಶುಪಾಲನಾ ಪರಂಪರೆಯ ದಾಖಲೆ, ಪಶುಪಾಲನಾ ಕೇಂದ್ರಿತ ವೃತ್ತಿಗಳು, ಊರ ಹೆಸರು ಎಲ್ಲವನ್ನು ಅವರ ಸಾಹಿತ್ಯದಲ್ಲಿ ಅನಾವರಣಗೊಳಿಸಿದ್ದಾರೆ. ನಾಗರಿಕತೆಯ ವಿಕಾಸದ ಹಂತದಲ್ಲಿನ ಬೇಟೆ, ಪಶುಪಾಲನೆ, ಹೈನುಗಾರಿಕೆ, ಜೀವನ ವಿಧಾನವನ್ನು ದಾಖಲಿಸಿದ್ದಾರೆ. ಅಲ್ಲದೆ ಪಶುಪಾಲನಾ ಪರಂಪರೆಯ ಮೌಖಿಕ ಮಹಾಕಾವ್ಯಗಳ ಸಮೀಕ್ಷೆಯನ್ನು ಈ ಸಂಶೋಧನೆ ನಿರೀಕ್ಷಿಸಿದೆ. ಹೀಗಾಗಿ ಸಾಮಾಜಿಕ ಪರಂಪರೆಯ ಪಶುಪಾಲನೆಯು ಸಾಹಿತ್ಯಕ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಪರಂಪರೆಯ ರೂಪಕದಂತಿರುವ ಕನಕದಾಸರ ಬದುಕು ಬರಹಗಳ ಮೇಲೆ ಬೀರಿರುವ ಗಾಢ ಪ್ರಭಾವ, ಪ್ರೆÃರಣೆ ಸಂಬಂಧಗಳನ್ನು ಅಧ್ಯಯನ ಮಾಡುವ ಸಂಪ್ರಬಂಧವಿದು.
೧೦. ಕನ್ನಡದ ಅನುಭಾವ ಪರಂಪರೆ ಮತ್ತು ಕನಕದಾಸರು ರೂಪಿಸಿದ ಅನುಭಾವದ ಸಂಬಂಧಗಳು (ಪ್ರಕಟ)
ಸಂಶೋಧನಾರ್ಥಿ : ಡಾ. ಕಿರಣ್ ಎಂ.ಗಾಜನೂರು, ಮಾರ್ಗದರ್ಶಕರು : ಡಾ. ಮೇಟಿ ಮಲ್ಲಿಕಾರ್ಜುನ
ಕನಕದಾಸರು ಯಾವುದೇ ಸಮಾಜ ಶಾಸ್ತಿçÃಯ ಚೌಕಟ್ಟುಗಳ ನೆರವಿಲ್ಲದೆ ಅನುಭಾವಿ ಚಿಂತನೆಗಳ ಮಹತ್ವವನ್ನು ಗುರುತಿಸುವ ಮೂಲಕ ಸೈದ್ಧಾಂತಿಕ ಸಂಶೋಧನೆಯ ಹಿನ್ನೆಲೆಯಲ್ಲಿ ವಿವರಿಸಿ ವಿಶ್ಲೇಷಿಸುವ, ಕನ್ನಡದ ಅನುಭಾವ ಪರಂಪರೆಯಲ್ಲಿನ ಅವರ ಅನುಭಾವಿ ಚಿಂತನೆಗಳ ಮಹತ್ವವನ್ನು ಶೋಧಿಸುವ ಸಂಪ್ರಬಂಧ.
೧೧. ಕನಕ ಕಂಡರಿಸಿದ ಪರಿಸರ (ಸಿದ್ಧತೆಯ ಹಂತ)
ಸಂಶೋಧನಾರ್ಥಿ : ಹೆಚ್.ದಂಡಪ್ಪ, ಮಾರ್ಗದರ್ಶಕರು : ಡಾ. ಬಸವರಾಜ ಕಲ್ಗುಡಿ
ಕನಕದಾಸರು ತಮ್ಮ ಅನುಭವಗಳನ್ನು ಕಲಾತ್ಮಕವಾಗಿ ಕಟ್ಟಿಕೊಟ್ಟಿದ್ದಾರೆ. ಈ ಅನುಭವಗಳು ಕಲೆಯಾಗಿ ದಟ್ಟವಾದ ಜೀವನದರ್ಶನ, ಮಾನವನ ಬದುಕಿನ ಅಂತರಂಗ ಮತ್ತು ಬಹಿರಂಗಗಳ ವಿನ್ಯಾಸ, ಮಾನವನ ವ್ಯಕ್ತಿತ್ವಗಳ ಸ್ವರೂಪ, ಅವನ ತುಡಿತ-ಮಿಡಿತ, ತವಕ-ತಲ್ಲಣ, ಪರಿಸರ, ಪ್ರಾಣಿ, ಪಕ್ಷಿ, ಪ್ರಕೃತಿ, ಪರಿಸರವನ್ನೆÃ ಕಂಡರಿಸಿವೆ. ಮಾನವ ಪರಿಸರವೆಂದರೆ ಅವರ ವ್ಯಕ್ತಿತ್ವ, ಸಮಾಜ, ರಾಜಕೀಯ ಸ್ಥಿತಿಗತಿಗಳು, ಆರ್ಥಿಕ ಪರಿಸ್ಥಿತಿ, ಕಲೆ, ಸಂಗೀತ ಒಟ್ಟಾರೆ ಅವರ ಸಾಂಸ್ಕೃತಿಕ ಪರಿಸರವೇ ಆಗಿರುವುದರಿಂದ ಅವುಗಳನ್ನು ಹೊಸ ದೃಷ್ಟಿಕೋನದ ಮೂಲಕ ವಿಶ್ಲೇಷಿಸಿಕೊಡುವ ಸಂಪ್ರಬಂಧ.
೧೨. ಕನಕದಾಸರ ಬದುಕು : ಮರುಚಿಂತನೆ (ಸಿದ್ಧತೆಯ ಹಂತ)
ಸಂಶೋಧನಾರ್ಥಿ : ಪ್ರೊ. ಜ್ಯೊÃತಿ ಹೊಸೂರ
ಕನಕದಾಸರ ಕಾಲ, ದೇಶ, ಸ್ಥಳ, ಹುಟ್ಟು ಜಾತಿ, ಮತ, ಪಂಥಗಳ ಹಿನ್ನೆಲೆ ಹಾಗೂ ಕೃತಿಗಳ ವಿಷಯಕ್ಕೆ ಸಂಬಂಧಿಸಿದಂತೆ ವಿಭಿನ್ನ ಅಭಿಪ್ರಾಯಗಳು ಪ್ರತಿಪಾದನೆಗೊಂಡಿವೆ. ಈ ಬಗ್ಗೆ ಗಂಭೀರ ಚಿಂತನೆ ಹಾಗೂ ಅಧ್ಯಯನ ನಡೆದು, ಕನಕದಾಸರ ಜೀವನಾಧಾರಿತ, ಸಾಹಿತ್ಯಾಧಾರಿತವಾದ ನಿಖರ ಸಂಶೋಧನೆ ಮಾಡುವ ಬಗೆಯನ್ನು ಈ ಅಧ್ಯಯನ ಒಳಗೊಂಡಿದೆ. ಈ ಸಂಶೋಧನೆಯಲ್ಲಿ ಕನಕದಾಸರ ಕಾಲ, ದೇಶ, ಜಾತಿ, ಕೌಟುಂಬಿಕ ಹಿನ್ನೆಲೆ, ಮತ, ಪಂಥ, ಗುರುಗಳು, ಮತದೀಕ್ಷೆ, ಪ್ರಭಾವ ಬೀರಿದ ಮಹಾನುಭಾವರು, ಭಕ್ತಿಪಂಥ, ಅನುಭಾವ, ಯೋಗಮಾರ್ಗ ಇವುಗಳ ವಿಶ್ಲೇಷಣೆಯ ಸಂಪ್ರಬಂಧ.
೧೩. ಭಾರತದ ಸಂತ ಪರಂಪರೆ ಮತ್ತು ಕನಕದಾಸರು (ಸಿದ್ಧತೆಯ ಹಂತ)
ಸಂಶೋಧನಾರ್ಥಿ : ದೇವುಪತ್ತಾರ್, ಮಾರ್ಗದರ್ಶಕರು : ಡಾ. ರೆಹಮತ್ ತರೀಕೆರೆ
ಅನಾದಿ ಕಾಲದಿಂದಲೂ ಭಾರತದಲ್ಲಿ ತತ್ವಪದಕಾರರು, ಸಂತರು, ಸೂಫಿಗಳು ಎಲ್ಲ ಭಾಷೆಯಲ್ಲೂ ಎಲ್ಲ ಕಾಲದಲ್ಲೂ ಸಾಹಿತ್ಯ ರಚನೆ ಮಾಡುತ್ತಾ ತಮ್ಮ ಅನುಭಾವದ ಸಾರವನ್ನು ತಿಳಿಸಿದ್ದಾರೆ. ಇವರನ್ನೆಲ್ಲಾ ಅಭ್ಯಸಿಸಿ ಕನಕದಾಸರ ಅನುಭಾವ ಪರಂಪರೆಯನ್ನು ಅವರ ನಾಲ್ಕು ಕೃತಿಗಳು, ಕೀರ್ತನೆಗಳು ಮತ್ತು ಮುಂಡಿಗೆಗಳ ಮೂಲಕ ತೌಲನಿಕವಾಗಿ ವಿಶ್ಲೆÃಷಿಸುವುದು ಈ ಸಂಪ್ರಬಂಧದ ಆಶಯ.
೧೪. ವ್ಯಕ್ತಿತ್ವ ನಿರ್ಮಾಣದ ನೆಲೆಗಳು : ಕನಕ ಮತ್ತು ಕುವೆಂಪು (ಸಿದ್ಧತೆಯ ಹಂತ)
ಸಂಶೋಧನಾರ್ಥಿ : ಡಾ. ಪಾರ್ವತಿ ಹಿರೇಮಠ, ಮಾರ್ಗದರ್ಶಕರು : ಡಾ. ದಾಕ್ಷಾಯಣಮ್ಮ
ದಾಸ ಸಾಹಿತ್ಯದ ಮೇರು ಪ್ರತಿಭೆ ಕನಕದಾಸರು ಸಮತಾವಾದಿಗಳು, ಪ್ರಗತಿಪರ ಚಿಂತಕರು, ವಿಚಾರವಾದಿಗಳು. ಹಾಗೆಯೇ ಹೊಸಗನ್ನಡ ಸಾಹಿತ್ಯದ ಯುಗಪ್ರವರ್ತಕರಾದ ಕುವೆಂಪು ಅವರೂ ಕೂಡ ಕನಕದಾಸರಂತೆ ಕಾವ್ಯದ ಮೂಲಕ ವಿಚಾರ ಕ್ರಾಂತಿಗೆ ಕರೆಕೊಟ್ಟವರು. ಇಂತಹ ಅದ್ಭುತ ಸಾಹಿತ್ಯ ಸೃಷ್ಟಿಯ ಮೂಲಸೆಲೆ ಅವರ ವ್ಯಕ್ತಿತ್ವದಲ್ಲಿ ಅನಾವರಣಗೊಂಡ ರೀತಿಯನ್ನು ಅವರಿಬ್ಬರ ಸಾಹಿತ್ಯ ಮತ್ತು ಬದುಕಿದ ಕಾಲ, ಸ್ಥಳ, ಐತಿಹ್ಯದ ಹಿನ್ನೆಲೆಯಲ್ಲಿ, ಸಾಮಾಜಿಕ, ಆಧ್ಯಾತ್ಮಿಕ, ವೈಚಾರಿಕ, ಧರ್ಮಸಮನ್ವಯ, ಆರ್ಥಿಕ, ಪ್ರೆÃಮ, ಭಕ್ತಿ, ಸಂಗೀತಜ್ಞಾನ, ಭಾಷಾ ಶೈಲಿಗಳ ನೆಲೆಯಲ್ಲಿ ವಿವೇಚಿಸುವ ಸಂಪ್ರಬಂಧ.
೧೫. ಕನಕದಾಸರ ಚಾರಿತ್ರಿಕ ನೆಲೆಗಳ ಶೋಧ (ಸಿದ್ಧತೆಯ ಹಂತ)
ಸಂಶೋಧನಾರ್ಥಿ : ಗಂಗಪ್ಪ ತಳವಾರ, ಮಾರ್ಗದರ್ಶಕರು : ಡಾ. ಡಿ.ಡೊಮಿನಿಕ್
ಕನಕದಾಸರು ಕೇವಲ ಭಕ್ತಿಪಂಥ, ಹರಿದಾಸ ಪರಂಪರೆಗೆ ಮಾತ್ರ ಸೇರಿದವರಲ್ಲ. ಅದಕ್ಕೂ ಮೀರಿದ ದ್ವೆöÊತ ದರ್ಶನಕ್ಕೂ ಮೀರಿದ ಸಾಮಾಜಿಕ ಕಾಳಜಿ ಹಾಗೂ ಮನುಕುಲದ ಚಿಂತನೆಗಳಿಗೆ ಸ್ಪಂದಿಸುವ ಒಬ್ಬ ಹೋರಟಗಾರರೂ ಹೌದು. ಹರಿನಾಮ ಚಿಂತನೆ ಎಂಬುದು ಕೇವಲ ದೈವಭಕ್ತಿ ಅಲ್ಲ ಅದರಲ್ಲಿ ಸಕಲ ಜೀವಸಂಕುಲಗಳ ಮೇಲಿನ ಚಿಂತನೆ, ಪ್ರಿÃತಿ, ಅಂತಃಕರಣ ಪೂರ್ವಕವಾಗಿ ಇರುವಂಥದ್ದು. ಈ ಹಿನ್ನೆಲೆಯಲ್ಲಿ ಕನಕದಾಸರ ಜೀವಿತ ಕಾಲದಲ್ಲಿ ಸಂಪರ್ಕ ಹೊಂದಿದ್ದ ಸಂತಶ್ರೆÃಷ್ಠರು, ಆಚಾರ್ಯರು, ಗುರುಗಳ ಭೇಟಿ ಮಾಡಿದ ತೀರ್ಥಕ್ಷೆÃತ್ರಗಳು – ಇವುಗಳ ಚಾರಿತ್ರಿಕ ನೆಲೆಗಳ ಶೋಧದ ಅಧ್ಯಯನ ಈ ಸಂಪ್ರಬಂಧದ ಉದ್ದೆÃಶ.
೧೬. ಐತಿಹಾಸಿಕ ಹಿನ್ನೆಲೆಯಲ್ಲಿ ಕನಕದಾಸರು : ಚಾರಿತ್ರಿಕ ಹಾಗೂ ಸಾಂಸ್ಕೃತಿಕ ನೋಟ (ಸಿದ್ಧತೆಯ ಹಂತ)
ಸಂಶೋಧನಾರ್ಥಿ : ಡಾ. ಚಂದ್ರಪ್ಪ ಸೊಬಟಿ
ಕನಕದಾಸರಂತಹ ದಾರ್ಶನಿಕ ಹಾಗೂ ಶ್ರೇಷ್ಠಕವಿಗಳ ಸುತ್ತ ಅವರು ಬದುಕಿದ ವರ್ತಮಾನದಲ್ಲಿ ನಡೆದ ಘಟನೆಗಳು ಸತ್ತನಂತರ ದಂತಕಥೆಗಳಾಗಿ ಜನರ ಬಾಯಿಂದ ಬಾಯಿಗೆ ಹರಿದು ದಾಖಲೆಯಾಗಿ ಉಳಿದಿರುತ್ತವೆ. ಇಂತಹ ದಂತಕಥೆಗಳಲ್ಲಿ ಅವರ ಬದುಕಿನ ಸಾಂಸ್ಕೃತಿಕ ಹಾಗೂ ಚಾರಿತ್ರಿಕ ದಾಖಲೆಗಳು ಅಂತರ್ಗತವಾಗಿದ್ದು ಸಂಸ್ಕೃತಿ, ಇತಿಹಾಸ ಹಾಗೂ ಸಮಾಜಶಾಸ್ತ್ರೀಯ ದೃಷ್ಟಿಯಿಂದ ಅಧ್ಯಯನ ಯೋಗ್ಯವಾಗಿರುತ್ತವೆ. ಈ ಹಿನ್ನೆಲೆಯಲ್ಲಿ ಕ್ಷೇತ್ರಕಾರ್ಯ ಮಾಡಿಸುವ ಮೂಲಕ ಲಭ್ಯವಿರುವ ಉಲ್ಲೇಖಗಳನ್ನು ಆಧರಿಸಿದ ಸಂಪ್ರಬಂಧವಾಗಿದೆ.