ಅಭಿಪ್ರಾಯ / ಸಲಹೆಗಳು

7) ಕನಕ ಸಾಹಿತ್ಯ ಲೋಕ ಪ್ರಬಂಧ ಸ್ಪರ್ಧೆ ಮತ್ತು ಕನಕ ಕಾವ್ಯ ಗಮಕ ಕಲಾ ಸಮ್ಮೇಳನ

ಕನಕ ಸಾಹಿತ್ಯ ಲೋಕ ಪ್ರಬಂಧ ಸ್ಪರ್ಧೆ

(ಅ) ಕನಕ ಜಯಂತಿಯ ಅಂಗವಾಗಿ ರಾಜ್ಯದ ೩೦ ಜಿಲ್ಲೆಗಳಲ್ಲಿ ಪ್ರೌಢಶಾಲೆಯ ೧೦ನೆಯ ತರಗತಿಯ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಡಯಟ್ಗಳ ಸಹಯೋಗದಲ್ಲಿ ನಡೆಸುವ `ಕನಕ ಸಾಹಿತ್ಯ ಲೋಕ ಪ್ರಬಂಧ ಸ್ಪರ್ಧೆ’. ಕನಕದಾಸರ ದಾರ್ಶನಿಕತ್ವ ಹಾಗೂ ಸಾಮಾಜಿಕ ಆಶಯಗಳ ಬಗ್ಗೆ ಬಾಲ ಹಾಗೂ ಯುವ ಮನಸ್ಸುಗಳು ಚಿಂತಿಸಬೇಕೆಂಬುದು ಈ ಪ್ರಬಂಧ ಸ್ಪರ್ಧೆಯ ಉದ್ದೆಶ. ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರತಿ ಜಿಲ್ಲೆಯಲ್ಲಿಯೂ ಕನಕ ಜಯಂತಿ ಆಚರಣೆಯ ಕಾರ್ಯಕ್ರಮದಲ್ಲಿ ಪ್ರಥಮ ಬಹುಮಾನ ರೂ.೫,೦೦೦/-ಗಳು, ದ್ವಿತೀಯ ಬಹುಮಾನ ರೂ.೪,೦೦೦/-, ತೃತೀಯ ಬಹುಮಾನ ರೂ.೩,೦೦೦/- ಸಮಾಧಾನಕರ ರೂ.೧,೦೦೦/-ದ ಎರಡು ಬಹುಮಾನಗಳನ್ನು ನೀಡಲಾಗುತ್ತಿದೆ.

 

(ಆ) ೨೦೧೯-೨೦ನೆಯ ಸಾಲಿನಿಂದ ಉನ್ನತ ಶಿಕ್ಷಣದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಉನ್ನತ ಮಟ್ಟದ ಕನಕ ಸಂಶೋಧನಾ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲು ತೀರ್ಮಾನಿಸಲಾಗಿದೆ. ಸಂಪ್ರಬಂಧ ಸ್ಪರ್ಧೆಯ ಹಂತಗಳು ಮೂರು. (೧) ಪದವಿ ಮಟ್ಟದ ವಿದ್ಯಾರ್ಥಿಗಳಿಗೆ (೨) ಸ್ನಾತಕೋತ್ತರ ಮಟ್ಟದ ವಿದ್ಯಾರ್ಥಿಗಳಿಗೆ (೩) ಯುವ ಸಂಶೋಧನಾರ್ಥಿಗಳೂ ಸೇರಿದಂತೆ ಯುವ ಸಾರ್ವಜನಿಕರಿಗೆ. ಮೂರು ಹಂತದಲ್ಲಿಯೂ ತಲಾ ಮೂರು ಬಹುಮಾನ. ಪ್ರತಿ ಬಹುಮಾನದ ಮೊತ್ತ ರೂ.೨೦,೦೦೦/-ಗಳು.

 

ಕನಕ ಕಾವ್ಯ ಗಮಕ ಕಲಾ ಸಮ್ಮೇಳನ

ಕನಕದಾಸರ ಕಾವ್ಯಗಳನ್ನು ಗಮಕ ವಾಚನ, ವ್ಯಾಖ್ಯಾನ, ಸಂಗೀತ, ನೃತ್ಯ, ಕಾವ್ಯಾಂತ್ಯಕ್ಷರಿ, ಪಾತ್ರಾಭಿನಯ ಮುಂತಾದ ವಿವಿಧ ಮಾಧ್ಯಮಗಳಲ್ಲಿ ಪ್ರಸ್ತುತಪಡಿಸಿದ ಒಂದು ವಿಶೇಷ ಅನುಭವ ನೀಡಿದ ಸಮ್ಮೇಳನವಿದು. ವಿವಿಧ ಭಾಗಗಳಿಂದ ಸುಮಾರು ೯೦ ಜನ ಕಲಾವಿದರು ಭಾಗವಹಿಸಿದ್ದರು. ಹಾವೇರಿ ಜಿಲ್ಲೆಯ ಪ್ರೌಢಶಾಲೆ ಮತ್ತು ಕಾಲೇಜು ಅಧ್ಯಾಪಕರು, ವಿದ್ಯಾರ್ಥಿಗಳು, ಕಲಾಸಕ್ತರು ಸೇರಿ ಸುಮಾರು ೬೦೦ಕ್ಕೂ ಹೆಚ್ಚು ಜನ ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು.

ಸಹಕಾರ : ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ, ಕಾಗಿನೆಲೆ ಹಾಗೂ ಕರ್ನಾಟಕ ಗಮಕ ಕಲಾ ಪರಿಷತ್ತು, ಬೆಂಗಳೂರು

 

ಇತ್ತೀಚಿನ ನವೀಕರಣ​ : 02-09-2021 03:07 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080