ಅಭಿಪ್ರಾಯ / ಸಲಹೆಗಳು

8) ವಿಶೇಷ ಯೋಜನೆಗಳು ಮತ್ತು ಪ್ರದರ್ಶನ ಪ್ರಕಾರಗಳು

ವಿಶೇಷ ಯೋಜನೆಗಳು

 

() ಕನಕದಾಸರ ಸಮಗ್ರ ಸಾಹಿತ್ಯ ಅನುವಾದ ಯೋಜನೆ

ಸಂತಶ್ರೇಷ್ಠ ಕವಿಯ ಕೃತಿಗಳ ಕಾವ್ಯ ವಿಸ್ತಾರ ಮತ್ತು ಆಶಯಗಳು ವಿನೂತನವಾಗಿದ್ದು ಭಾರತೀಯ ಸಾಹಿತ್ಯ ಚರಿತ್ರೆಗೆ ಬೆಲೆಯುಳ್ಳ ಕೊಡುಗೆಗಳಾಗಿವೆ. ಆದ್ದರಿಂದ ಕನಕದಾಸರ ಸಮಗ್ರ ಸಾಹಿತ್ಯವನ್ನು ಇಂಗ್ಲಿಷ್, ಹಿಂದಿ, ಉರ್ದು, ತೆಲುಗು, ತಮಿಳು, ಮಲೆಯಾಳಂ, ಕೊಂಕಣಿ, ಕೊಡವ, ಬ್ಯಾರಿ, ತುಳು, ಸಂಸ್ಕೃತ, ಮರಾಠಿ, ಪಂಜಾಬಿ, ಬೆಂಗಾಲಿ, ಅಸ್ಸಾಮಿ – ಈ ೧೫ ಭಾಷೆಗಳಿಗೆ ಅನುವಾದಿಸಲಾಗುತ್ತಿದೆ. ಈ ೧೫ ಭಾಷೆಗಳಿಗೆ ಅನುವಾದ ಮಾಡುವ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ೧೫ ಜನ ಭಾಷಾ ಸಂಪಾದಕರು, ೫ ಜನ ಕನ್ನಡ ವಿದ್ವಾಂಸರ, ೧೫ ಜನ ಭಾಷಾ ಪರಿಶೀಲಕರ ಮಾರ್ಗದರ್ಶನದಲ್ಲಿ ೯೦ ಜನ ಅನುವಾದಕರು ಕಾರ್ಯನಿರ್ವಹಿಸಿದ್ದಾರೆ. ಈ ೧೫ ಭಾಷೆಗಳ ಪೈಕಿ ೧೩ ಭಾಷಾ ಆವೃತ್ತಿಗಳು ಮುದ್ರಣ ಹಂತದಲ್ಲಿವೆ. ೨ ಭಾಷಾ ಆವೃತ್ತಿಗಳ ಪರಿಶೀಲನಾ ಕಾರ್ಯ ನಡೆಯುತ್ತಿದೆ. ಇದರಲ್ಲಿ ಪಂಜಾಬಿ ಭಾಷಾ ಆವೃತ್ತಿಯು ಸಮರ್ಥ ಅನುವಾದಕರು ದೊರಕದ ಕಾರಣ ಈ ಭಾಷೆಯ ಬದಲಿಗೆ ಗುಜರಾತಿ ಭಾಷೆಯ ಅನುವಾದ ಕಾರ್ಯ ಕೈಗೆತ್ತಿಕೊಂಡಿದೆ. ಪ್ರಸಕ್ತ ೧೩ ಭಾಷಾ ಆವೃತ್ತಿಗಳಲ್ಲಿ ತಲಾ ೩ ಸಂಪುಟಗಳಂತೆ ಕನಕದಾಸರ ಸಮಗ್ರ ಅನುವಾದ ಸಾಹಿತ್ಯ ಪ್ರಕಟಗೊಳ್ಳಲಿದೆ.

ಯೋಜನೆಯ ಪ್ರಧಾನ ಸಂಪಾದಕರು: ಡಾ. ಡಿ.ಎ.ಶಂಕರ್, ಕನ್ನಡ ವಿದ್ವಾಂಸರು: ಡಾ. ಟಿ.ಎನ್.ನಾಗರತ್ನ, ಪ್ರೊ. ಸಿ.ನಾಗಣ್ಣ, ಎಸ್.ಸಿರಾಜ್ ಅಹಮ್ಮದ್, ಚನ್ನಪ್ಪ ಕಟ್ಟಿ, ತಾರಿಣಿ ಶುಭದಾಯಿನಿ, ಭಾಷಾ ಸಂಪಾದಕರು: ನಾಗೇಶ್ ಕಾಲೂರು(ಕೊಡವ), ಪ್ರೊ. ಎ.ವಿ. ನಾವಡ(ತುಳು), ಡಾ. ಗೀತಾ ಶೆಣೈ (ಕೊಂಕಣಿ), ಡಾ. ಮೀರಾ ಚಕ್ರವರ್ತಿ (ಬೆಂಗಾಲಿ), ಪ್ರೊ. ಬಿ.ವೈ. ಲಲಿತಾಂಬ (ಹಿಂದಿ), ಡಾ. ನಟರಾಜ ಹುಳಿಯಾರ್ (ಇಂಗ್ಲಿಷ್), ಬಿ.ಎಂ. ಹನೀಫ್(ಬ್ಯಾರಿ), ಮಾಹೇರ್ ಮನ್ಸೂರ್ (ಉರ್ದು), ಡಾ. ರಾಮಕೃಷ್ಣ ಮರಾಠೆ (ಮರಾಠಿ), ಸುಧಾಕರ ರಾಮನ್ ತಾಲಿ (ಮಲೆಯಾಳಂ), ಸ.ರಘುನಾಥ್ (ತೆಲುಗು), ಜೆ. ಶ್ರಿÃನಿವಾಸ ಮೂರ್ತಿ (ಸಂಸ್ಕೃತ), ಡಾ. ಚೆ.ರಾಮಸ್ವಾಮಿ (ತಮಿಳು), ಸಂಜೀವ್ಕುಮಾರ್ ನಾಥ್ (ಅಸ್ಸಾಂ) ಮತ್ತು ಸೋನಾಲ್ ಪರೀಕ್ (ಗುಜರಾತಿ).

 

 

() ಕರ್ನಾಟಕ ತತ್ವಪದಕಾರರ ಸಮಗ್ರ ಸಾಹಿತ್ಯ ಪ್ರಕಟಣಾ ಯೋಜನೆ

ಯಾವುದೇ ಜಾತಿ, ಧರ್ಮದ ಲೇಪವಿಲ್ಲದೆ ಮಾನವೀಯ ಧರ್ಮದ ಪ್ರತಿಪಾದನೆಯ ಪ್ರತೀಕವಾದ ತತ್ವಪದ ಸಾಹಿತ್ಯ ಪ್ರಕಾರವು ಬಹು ವಿಶಿಷ್ಟವಾದುದು. ಅಲ್ಲಲ್ಲಿ ಬಿಡಿ ಬಿಡಿಯಾಗಿ ಕೆಲವು ಪುಸ್ತಕಗಳಲ್ಲಿ ಪ್ರಕಟವಾಗಿದ್ದರೂ ಬಹುತೇಕ ತತ್ವಪದಗಳು ಇನ್ನೂ ಮೌಖಿಕ ಪರಂಪರೆಯಲ್ಲಿಯೇ ಉಳಿದಿವೆ. ಹೀಗೆ ರಾಜ್ಯದಾದ್ಯಂತ ಲಭ್ಯವಿರುವ ಪ್ರಕಟಿತ ಹಾಗೂ ಇನ್ನೂ ಪ್ರಕಟವಾಗದೇ ಹೇರಳವಾಗಿ ಉಳಿದಿರುವ ತತ್ವಪದ ಸಾಹಿತ್ಯವನ್ನು ಸಂಗ್ರಹಿಸಿ ಪ್ರಕಟಿಸುವ ಬೃಹತ್ ಯೋಜನೆ ರೂಪಿಸಿ ಜಾರಿಗೊಳಿಸಲಾಗುತ್ತಿದೆ. ಅಲ್ಲದೆ ಈ ಕಾರ್ಯ ಅಧ್ಯಯನ ಕೇಂದ್ರದ ತೌಲನಿಕ ಅಧ್ಯಯನದ ಉದ್ದೆÃಶಕ್ಕೂ ಪೂರಕವಾಗಿದೆ. ಆದ್ದರಿಂದ ರಾಜ್ಯದ ೨೭ ಜಿಲ್ಲೆಗಳಿಗೆ ಒಬ್ಬೊಬ್ಬ ಸಂಪಾದಕರು, ಅವರಿಗೆ ನೆರವಾಗಲು ಇಬ್ಬರು ಕ್ಷೆÃತ್ರ ತಜ್ಞರನ್ನು ನೇಮಿಸಲಾಗಿದೆ. ತತ್ವಪದಗಳ ಪರಿಶೀಲನೆ ಮತ್ತು ಮಾರ್ಗದರ್ಶನಕ್ಕಾಗಿ ಸಂಪಾದನಾ ಹಾಗೂ ಪರಿಶೀಲನಾ ಸಮಿತಿಯನ್ನು ರಚಿಸಲಾಗಿದೆ. ಒಟ್ಟಾರೆ ಐವತ್ತು ಸಂಪುಟಗಳು. ೩೨ ಬಿಡುಗಡೆಯಾಗಿವೆ. ೧೮ ಸಂಪುಟಗಳು ಮುದ್ರಣಕ್ಕೆ ಸಿದ್ಧವಾಗಿವೆ.

ಪ್ರಧಾನ ಸಂಪಾದಕರು: ಕಾ ತ ಚಿಕ್ಕಣ್ಣ; ಯೋಜನಾ ಸಂಪಾದಕರು: ಡಾ. ನಟರಾಜ ಬೂದಾಳ್,
ಸಂಪಾದನ ಸಮಿತಿ ಅಧ್ಯಕ್ಷರು: ಡಾ. ಕೆ.ಮರುಳ ಸಿದ್ಧಪ್ಪ, ಸದಸ್ಯರು: ಡಾ. ರಹಮತ್ ತರೀಕೆರೆ, ಡಾ. ಮೀನಾಕ್ಷಿ ಬಾಳಿ, ಸತೀಶ್ ಕುಲಕರ್ಣಿ, ಪ್ರೊ. ವೈ.ಬಿ.ಹಿಮ್ಮಡಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರು – ಸದಸ್ಯರು.

 

ತತ್ವಪದ ಸಂಗಮ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಕರ್ನಾಟಕದಲ್ಲಿರುವ ಪ್ರಮುಖ ತತ್ವಪದಕಾರರನ್ನು ಒಗ್ಗೂಡಿಸಿ, ತತ್ವಪದಗಳ ಗಾಯನ, ಪ್ರಾತ್ಯಕ್ಷಿಕೆಗಳನ್ನು ತತ್ವಪದ ಕಾವ್ಯ ಶಿವರಾತ್ರಿ ಎಂಬ ಹೆಸರಿನಲ್ಲಿ ಕರ್ನಾಟಕ ಕಲಾಗ್ರಾಮದಲ್ಲಿ ಅಹೋರಾತ್ರಿ ಏರ್ಪಡಿಸಲಾಗಿತ್ತು. ಗುಲ್ಬರ್ಗಾದ ಕಲಾಮಂದಿರದಲ್ಲಿ ೨ ದಿನಗಳ ಕಾಲ ತತ್ವಪದ ಹಾಡುಹಬ್ಬ ಎಂಬ ಶೀರ್ಷಿಕೆಯಲ್ಲಿ ಏರ್ಪಡಿಸಲಾಗಿತ್ತು. ವಿಜಯಪುರ ಮಹಿಳಾ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ತತ್ವಪದ ಸಂಗಮ ಸಮಾವೇಶವನ್ನು ಏರ್ಪಡಿಸಲಾಗಿತ್ತು. ಈ ಎಲ್ಲಾ ತತ್ವಪದ ಗಾಯನ ಸಮ್ಮೆಳನಗಳಿಗೆ ಉತ್ತಮ ಪ್ರತಿಕ್ರಿಯೆ ದೊರಕಿತು.

 

 

ಪ್ರದರ್ಶನ ಪ್ರಕಾರಗಳು

(i) ಕನಕ ಗೊಂಬೆಯಾಟ

ಸಂತಕವಿ ಕನಕದಾಸರನ್ನು ವಿಭಿನ್ನ ಮಾಧ್ಯಮಗಳಲ್ಲಿ ಪ್ರಚುರಪಡಿಸಿ ಪ್ರಸಾರ ಮಾಡುವುದು ಅಧ್ಯಯನ ಕೇಂದ್ರದ ಆಶಯ. ಈ ಆಶಯದಿಂದ ೯೦ ನಿಮಿಷಗಳ ಅವಧಿಯ ಕನಕಗೊಂಬೆಯಾಟವನ್ನು ಸಿದ್ಧಪಡಿಸಲಾಗಿದೆ. ಸಂಗೀತ ಪ್ರಧಾನವಾದ ಈ ಗೊಂಬೆಯಾಟದಲ್ಲಿ ಕನಕದಾಸರ ಜೀವನ ಹಾಗೂ ಸಾಹಿತ್ಯ ಕೃತಿಗಳ ಪರಿಚಯ ಮತ್ತು ಸಂದೇಶವನ್ನು ಕಲಾಭಿಮಾನಿಗಳಿಗೆ ಸುಲಭವಾಗಿ ತಲುಪಿಸುವ ದೃಷ್ಟಿಯಿಂದ ಸಿದ್ಧಪಡಿಸಲಾಗಿದೆ. ನಾಡೋಜ ಬೆಳಗಲ್ಲು ವೀರಣ್ಣನವರ ನೇತೃತ್ವದಲ್ಲಿ ಈ ಗೊಂಬೆಯಾಟವನ್ನು ಸಿದ್ಧಪಡಿಸಲಾಗಿದೆ. ಈ ಗೊಂಬೆಯಾಟವು ರಾಜ್ಯಾದ್ಯಂತ ಪ್ರದರ್ಶನಗೊಳ್ಳುತ್ತಿದೆ. ಹಿರಿಯ ವಿದ್ವಾಂಸರಾದ ಶ್ರೀ ನಿಸರ್ಗಪ್ರಿಯ ಅವರು ಕನಕಗೊಂಬೆಯಾಟಕ್ಕೆ ರಂಗಕೃತಿಯನ್ನು ರಚಿಸಿಕೊಟ್ಟಿದ್ದಾರೆ. ಇದರ ಪರಿಷ್ಕರಣವನ್ನು ಡಾ ಹಿ.ಶಿ. ರಾಮಚಂದ್ರೇಗೌಡ ಹಾಗೂ ಶ್ರೀ ಕಾ ತ ಚಿಕ್ಕಣ್ಣ ನೀಡಿದ್ದಾರೆ.

ಸಹಕಾರ : ಮನುಕುಲ ಟ್ರಸ್ಟ್, ಸಿಂಧನೂರು, ರಾಯಚೂರು ಜಿಲ್ಲೆ
[ಒಟ್ಟು ಕಾರ್ಯಕ್ರಮಗಳು: ಮಂಡ್ಯ, ಸಿಂಧನೂರು, ಬಳ್ಳಾರಿ, ಮಡಿಕೇರಿ, ಬೆಂಗಳೂರು-]

 

 

(ii) ಕನಕ ಕಾವ್ಯ ನೃತ್ಯ ವೈಭವ

ಕನಕ ಕೀರ್ತನೆಗಳ ಆಧಾರಿತ ನೃತ್ಯರೂಪಕ. ೪೫ ನಿಮಿಷಗಳ ಅವಧಿಯ ಈ ನೃತ್ಯಕ್ಕೆ ಅಗತ್ಯವಾದ ಸಾಹಿತ್ಯ, ಕನಕದಾಸರ ಕಾವ್ಯ ಸಂಯೋಜನೆ, ಕೀರ್ತನೆಗಳ ಸ್ವರ ಸಂಯೋಜನೆ, ನೃತ್ಯ ಸಂಯೋಜನೆ ಮೂಲಕ ಈ ನೃತ್ಯರೂಪಕವನ್ನು ಸಿದ್ಧಪಡಿಸಲಾಗಿದೆ. ಶ್ರೀ ಕಾ.ತ.ಚಿಕ್ಕಿಣ್ಣ ಅವರು ಸಾಹಿತ್ಯವನ್ನು ಸಿದ್ಧಪಡಿಸಿದ್ದು, ಹಿರಿಯ ಮಾಂಡಲಿನ್ ಕಲಾವಿದರು ಹಾಗೂ ರಾಗ ಸಂಯೋಜಕರಾದ ಶ್ರೀ ಎನ್.ಎಸ್.ಪ್ರಸಾದ್ ಅವರಿಂದ ರಾಗ ಸಂಯೋಜಿಸಿದ್ದು, ನೃತ್ಯ ಸಂಯೋಜನೆಯನ್ನು ವಿದುಷಿ ಶ್ರಿÃಮತಿ ರೂಪ ರಾಜೇಶ್ ಅವರು ನಿರ್ವಹಿಸಿದ್ದಾರೆ.

ಇತ್ತೀಚಿನ ನವೀಕರಣ​ : 15-12-2021 11:38 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080